ಚಿಕ್ಕಮಗಳೂರು:ನಗರದಲ್ಲಿ ಆಮೆಗಳ ಮಾರಾಟ ಮಾಡುವ ಜಾಲದ ಬಗ್ಗೆ ಸ್ಥಳೀಯರ ಖಚಿತ ಮಾಹಿತಿ ಆಧರಿಸಿ, ಜಿಲ್ಲೆಯ ವಲಯಾರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಆಮೆಗಳ ಅಕ್ರಮ ಮಾರಾಟ: ಆರೋಪಿಗಳ ಹೆಡೆಮುರಿ ಕಟ್ಟಿದ ಅರಣ್ಯಾಧಿಕಾರಿಗಳು - ಚಿಕ್ಕಮಗಳೂರು ವಲಯಾರಣ್ಯಾಧಿಕಾರಿಗಳ ಸುದ್ದಿ
ಆಮೆಗಳ ಅಕ್ರಮ ಮಾರಾಟ ಜಾಲವನ್ನು ಚಿಕ್ಕಮಗಳೂರು ವಲಯಾರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧನ
ಚಿಕ್ಕಮಗಳೂರು ನಗರದ ಅಂಕುಶ್, ಮೂಡಿಗೆರೆ ಜಾವಳಿಯ ಸುಖೇಶ್, ಪರಮೇಶ್ ನಾಯಕ, ಸುಮನ್, ದರ್ಶನ್, ನಾಗರಾಜ್, ಇಂದಾವರದ ಹರ್ಷಗೌಡ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಜೀವಂತ ಆಮೆ ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ಕಾರು, ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು, ಆರೋಪಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.