ಕರ್ನಾಟಕ

karnataka

ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ: ಮೈಕ್​ ಅಳವಡಿಸುವಂತೆ ಪ್ರತಿಭಟನೆ ನಡೆಸಿದ ದತ್ತ ಭಕ್ತರು

By

Published : Nov 26, 2020, 5:07 PM IST

ದತ್ತಭಜನೆಗೆ ಮೈಕ್ ಅಳವಡಿಸುವಂತೆ ಆಗ್ರಹಿಸಿ ಹೋಮ - ಮಂಟಪದಲ್ಲಿ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಋಷಿಕುಮಾರ ಸ್ವಾಮೀಜಿ‌ ಸೇರಿದಂತೆ ದತ್ತಭಕ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

dattamala-abhiyana-end-in-chikkamagaluru
ಮೈಕ್​ ಅಳವಡಿಕೆಗೆ ಪ್ರತಿಭಟನೆ ನಡೆಸಿದ ದತ್ತ ಭಕ್ತರು

ಚಿಕ್ಕಮಗಳೂರು:15ನೇ ವರ್ಷದ ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ಇಂದು ದತ್ತಪೀಠಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತರು ಹಾಗೂ ದತ್ತಮಾಲಾಧಾರಿಗಳು ಇನಾಂ ದತ್ತಾತ್ರೇಯ ಬಾಬಬುಡನ್ ಗಿರಿಯಲ್ಲಿ ದತ್ತ ಪಾದುಕೆ ದರ್ಶನ ಪಡೆದುಕೊಂಡರು.

ಇದನ್ನೂ ಓದಿ...ಗಾಂಜಾ ಸಾಗಾಟ: ನಾಲ್ವರನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು

ಕೊರೊನಾ ಹಿನ್ನೆಲೆ ದತ್ತ ಪಾದುಕೆ ದರ್ಶನಕ್ಕೆ ಜಿಲ್ಲಾಡಳಿತ 200 ಭಕ್ತರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಜಿಲ್ಲಾಡಳಿತ ನೇಮಿಸಿದ್ದ ದತ್ತ ಭಕ್ತರು ಶೆಡ್​​​​​ನಲ್ಲಿ ಹೋಮ - ಹವನ ಸೇರಿದಂತೆ ಧಾರ್ಮಿಕ ಕೈಂಕರ್ಯ ನೆರವೇರಿಸಿದರು. ಈ ವೇಳೆ, ದತ್ತ ಮಾಲಾಧಾರಿಗಳಿಂದ ಹೋಮ‌ ಮಂಟಪದಲ್ಲಿ ದಿಢೀರ್ ಪ್ರತಿಭಟನೆ ನಡೆಯಿತು.

ಮೈಕ್​ ಅಳವಡಿಕೆಗೆ ಪ್ರತಿಭಟನೆ ನಡೆಸಿದ ದತ್ತ ಭಕ್ತರು

ಐಡಿ ಪೀಠದಲ್ಲಿ ಮೈಕ್ ಅಳವಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಸಿದ್ದಲಿಂಗ ಸ್ವಾಮೀಜಿ, ಖುಷಿ ಕುಮಾರ ಸ್ವಾಮೀಜಿ ಸೇರಿದಂತೆ ದತ್ತ ಭಕ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details