ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಮಹಾಮಳೆಯಿಂದ ಅತಿವೃಷ್ಟಿಗೆ ಒಳಗಾದ ಪ್ರದೇಶಗಳನ್ನು ಶಾಸಕ ಸಿ.ಟಿ.ರವಿ ವೀಕ್ಷಿಸಿದ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು. ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಜೀವನದಲ್ಲಿ ಇಂತಹ ದುರಂತ ಜಿಲ್ಲೆಯಲ್ಲಿ ನೋಡಿರಲಿಲ್ಲ. ದೇವರು ಜನರನ್ನು ಬದುಕಿಸಿದ್ದಾನೆ. ಸರ್ಕಾರ ಯಾವ ನಿಯಮ ನೋಡಬಾರದು. ಅವರ ಬದುಕಿಗೆ ಆಸರೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಇಲ್ಲಿನ ಜಾಗಕ್ಕೆ ಸ್ವೇಷಲ್ ಪ್ಯಾಕೇಜ್ ನೀಡಬೇಕು. ನಿಮಯಗಳು ಬೇಡ. ಅವರ ಹಿಂದಿನ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನರನ್ನು ಈ ಸಮಯದಲ್ಲಿ ಅಲೆದಾಡಿಸಬಾರದು. ಆಸ್ತಿ ಪಾಸ್ತಿ ಹಾನಿಯ ಲೆಕ್ಕಾಚಾರ ಹಾಕಿ ಅವರು ಪುನರ್ ನಿರ್ಮಾಣ ಮಾಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 15 ಅಥವಾ 16 ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಸಂತ್ರಸ್ತರ ಸ್ಪಂದನೆಗೆ ನೆರವಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಇಂತಹ ಜಾಗಗಳಿಗೆ ಬರದಿದ್ದರೇ ಅವರಿಗೆ ಸಮಸ್ಯೆ ಅರಿವಾಗುವುದಿಲ್ಲ. ಮುಖ್ಯಮಂತ್ರಿಗಳು ಬಂದಾಗ ಇಂತಹ ಜಾಗ ತೋರಿಸಬೇಕು. ಆಗ ಮಾತ್ರ ಅವರಿಗೆ ಭೀಕರತೆಯ ಅರಿವಾಗುತ್ತದೆ. ಇಲ್ಲಿಯವರೆಗೂ 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 22 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.