ಕರ್ನಾಟಕ

karnataka

ETV Bharat / state

ರಸ್ತೆಗುಂಡಿ ಮುಚ್ಚಿಸಿ ಪ್ರಾಣ ಉಳಿಸಿ: ಚಿಕ್ಕಮಗಳೂರಲ್ಲಿ ವಾಹನ ಸವಾರರ ಅಳಲು

ಚಿಕ್ಕಮಗಳೂರು ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು, ದುರಸ್ತಿಗೆ ಆಗ್ರಹಿಸಿ ವಾಹನ ಸವಾರರು ಪ್ರತಿಭಟನೆ ನಡೆಸಿದ್ದಾರೆ.

By

Published : Dec 3, 2019, 9:13 PM IST

road
ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು:ನಗರದಲ್ಲಿನ ರಸ್ತೆಗಳು ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದು, ದುರಸ್ತಿಗೆ ಆಗ್ರಹಿಸಿ ವಾಹನ ಸವಾರರು ಹಾಗೂ ಕಾಂಗ್ರೆಸ್​​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಗರದ ದೀಪಾ ನರ್ಸಿಂಗ್ ಹೋಂ ಮುಂಭಾಗ ಹಾದು ಹೋಗುವ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ಗುಂಡಿ ಬಿದ್ದಿದ್ದು ಇಲ್ಲಿ ಸಾಕಷ್ಟು ವಾಹನ ಸವಾರರು ಹೋಗುವಾಗ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ಇತ್ತ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ,ಗುಂಡಿಯನ್ನು ಮುಚ್ಚಿಸುವ ಕೆಲಸ ಮಾಡುತ್ತಿಲ್ಲ ಎಂದೂ ಆರೋಪಿಸಿ ಸಚಿವ ಸಿ.ಟಿ. ರವಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಈಗಾಗಲೇ ದಂಡರಮಕ್ಕಿ ರಸ್ತೆಯಲ್ಲಿ ಹೋಗುವ ವೇಳೆ ಯುವತಿ ರಸ್ತೆ ಗುಂಡಿಯಲ್ಲಿ ತನ್ನ ವಾಹನದಿಂದ ಬಿದ್ದು ಜೀವ ಕಳೆದುಕೊಂಡಿದ್ದಾಳೆ.ಇಷ್ಟಾದರೂ ಸಚಿವ ಸಿ ಟಿ ರವಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚಿಸುವ ಕೆಲಸಕ್ಕೆ ಮುಂದಾಗಿಲ್ಲ.ಇನ್ನಾದರೂ ಸಚಿವರು ಇತ್ತ ಗಮನ ಹರಿಸಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.ಈ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಕಾಂಗ್ರೆಸ್​​ ಕಾರ್ಯಕರ್ತರು ಭಾಗವಹಿಸಿದ್ರು.

For All Latest Updates

TAGGED:

ABOUT THE AUTHOR

...view details