ಕರ್ನಾಟಕ

karnataka

ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್​ವೈ, ಅರುಣ್ ಸಿಂಗ್

ಹರಿಹರಪುರದ ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.

By

Published : Apr 22, 2022, 7:43 PM IST

Published : Apr 22, 2022, 7:43 PM IST

ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್​ವೈ ಹಾಗೂ ಅರುಣ್ ಸಿಂಗ್
ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್​ವೈ ಹಾಗೂ ಅರುಣ್ ಸಿಂಗ್

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರದ ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿ, ಮಠದ ಸಚ್ಚಿದಾನಂದ ಸ್ವಾಮೀಜಿ ದರ್ಶನ ಮಾಡಿದ್ದೇನೆ. ಈ ಕ್ಷೇತ್ರಕ್ಕೆ ಬಂದಿದ್ದು ತುಂಬಾ ಖುಷಿ ತಂದಿದೆ. ಈ ಜಾಗದಲ್ಲಿ ರಾಜಕೀಯ ಚರ್ಚೆ ಬೇಡ ಎಂದು ಹೇಳಿದರು.

ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್​ವೈ, ಅರುಣ್ ಸಿಂಗ್

ಇದನ್ನೂ ಓದಿ:ಆರ್​ಎಸ್​ಎಸ್​-ಎಸ್‌ಡಿಪಿಐ ಹೋಲಿಕೆ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನ: ಸಚಿವ ಜೋಶಿ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ಬಾರಿ ರಾಜಕೀಯ ದೊಂಬರಾಟಕ್ಕೆ ಬೆಲೆ ಕೊಡಲು ಹೋಗಲ್ಲ. ಅನೇಕ ದಿನಗಳಿಂದ ಪಕ್ಷದ ಕಾರ್ಯ ಕ್ರಮಗಳಲ್ಲಿ ಭಾಗವಹಿಸದ್ದೇನೆ. ಜನ ಇಂದು ಮೋದಿ-ಬಿಜೆಪಿ ಜೊತೆ ಇದ್ದಾರೆ. ನಮ್ಮ ಗುರಿ 150 ಕ್ಷೇತ್ರ ಗೆಲ್ಲುವುದು ಅಷ್ಟೆ. ಆ ಗುರಿ ಮುಟ್ಟಲು ಎಲ್ಲಾ ಪ್ರಯತ್ನ ಮಾಡ್ತೀವಿ, ಯಶಸ್ವಿಯಾಗುತ್ತೇವೆಂಬ ನಂಬಿಕೆ ಇದೆ ಎಂದು ವಿಶ್ವಾಸ ಹೊರಹಾಕಿದರು.

For All Latest Updates

TAGGED:

ABOUT THE AUTHOR

...view details