ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಬಿಳಗೂರು ವ್ಯಾಪ್ತಿಯ ಕಾಫಿ ತೋಟದಲ್ಲಿ ರೈತನೋರ್ವನ ಮೇಲೆ ಕಾಡುಕೋಣ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡಿದಿದೆ. ಚನ್ನಪ್ಪ ಎಂಬಾತ ಗಾಯಗೊಂಡ ರೈತ.
ರೈತನ ಕುತ್ತಿಗೆ ಭಾಗಕ್ಕೆ ಬಲವಾಗಿ ತಿವಿದ ಕಾಡುಕೋಣ.. - ಅರಣ್ಯ ಇಲಾಖೆ
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಕೋಣವೊಂದು ದಾಳಿ ಮಾಡಿದೆ. ರೈತನ ಕುತ್ತಿಗೆಯ ಭಾಗಕ್ಕೆ ಬಲವಾಗಿ ತಿವಿದು ಕಾಡುಕೋಣ ಓಡಿ ಹೋಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗಾಯಗೊಂಡ ರೈತ ಚನ್ನಪ್ಪ
ಕಾಫಿ ತೋಟದಲ್ಲಿ ಚನ್ನಪ್ಪ ಕಾಫಿ ಗಿಡಗಳಿಗೆ ಕಸಿ ಮಾಡುತ್ತಿದ್ದ ವೇಳೆ ತೋಟದಲ್ಲಿಯೇ ಇದ್ದ ಕಾಡುಕೋಣ ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಬಲವಾಗಿ ತಿವಿದು ಓಡಿ ಹೋಗಿದೆ. ರೈತ ಚನ್ನಪ್ಪನ ಕುತ್ತಿಗೆ ಭಾಗ ಸೀಳಿ ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.