ಕರ್ನಾಟಕ

karnataka

ETV Bharat / state

ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪ.. ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ

ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪದಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್​ಎಫ್​ಒ ಹಾಗೂ ಡಿಆರ್​ಎಫ್​ಒ ವಿರುದ್ಧ ಜಿಲ್ಲೆಯ ಆಲ್ಡೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Case Filed against Forest Officers
ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

By

Published : Jun 16, 2020, 2:30 PM IST

ಚಿಕ್ಕಮಗಳೂರು :ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್​ಎಫ್​ಒ ಹಾಗೂ ಡಿಆರ್​ಎಫ್​ಒ ಮೇಲೆ ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.

ಜಿಲ್ಲೆಯ ಆಲ್ಡೂರು ಪೊಲೀಸ್​ ಠಾಣೆಯಲ್ಲಿ ವಲಯ ಅರಣ್ಯಧಿಕಾರಿ ಎಲ್ ಸ್ವಾತಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 6ರಂದು ನಗರದ ಹೊರ ವಲಯದ ವಸ್ತಾರೆ ಬಳಿ ಇವರು ವಾಹನದಲ್ಲಿ ಹೋಗುವಾಗ ಅಡ್ಡಾದಿಡ್ಡಿ ವಾಹನ ಚಲಾಯಿಸಿರುವುದು ಕಂಡು ಬಂದಿದೆ.

ಈ ಕುರಿತು ಪೊಲೀಸರು ಚಾಲಕನಿಗೆ ವಾಹನ ನಿಲ್ಲಿಸುವಂತೆ ಹೇಳಿದರೂ ವಾಹನ ನಿಲ್ಲಿಸಿಲ್ಲ. ನಂತರ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಲಾಕ್​ಡೌನ್ ನಿಯಮಾನುಸಾರ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೂ ಅಗತ್ಯ ಸಂಚಾರಕ್ಕೆ ನಿರ್ಬಂಧವಿದೆ. ಅನುಮತಿ ಪತ್ರ ತೋರಿಸಿ ಎಂದು ಪೊಲೀಸರು ಕೇಳಿದರೂ ಉಡಾಫೆ ಉತ್ತರ ನೀಡಿದ್ದಾರೆ.

ಈ ಇಬ್ಬರೂ ಅಧಿಕಾರಿಗಳು ಮಾಸ್ಕ್ ಕೂಡ ಧರಿಸಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ಚಾಲಕ ಮದ್ಯಪಾನ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಹಿನ್ನಲೆ ಆರ್​ಎಫ್​ಒ ಸ್ವಾತಿ ಹಾಗೂ ಡಿಆರ್​ಎಫ್​ಒ ಪ್ರದೀಪ್ ಮೇಲೆ ಆಲ್ಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details