ಚಿಕ್ಕಬಳ್ಳಾಪುರ: ಕಾಯಿಲೆ ಹಾಗೂ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಿ ಅಂತ ದೇವಸ್ಥಾನಕ್ಕೆ ಬರುವ ಮಹಿಳೆಯರ ಜತೆ ಇಲ್ಲೊಬ್ಬ ಪೂಜಾರಿ ಅಸಭ್ಯವಾಗಿ ವರ್ತಿಸುತ್ತಾನೆ ಎಂಬ ಆರೋಪ ಕೇಳಿಬಂದಿದೆ.
ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರ ಜತೆ ಕಳ್ಳ ಪೂಜಾರಿಯ ನೃತ್ಯ... ವಿಡಿಯೋ ವೈರಲ್ - ದೇವಸ್ಥಾನ
ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ಕಳ್ಳ ಪೂಜಾರಿ ಒತ್ತಾಯ ಮಾಡುತ್ತಾನಂತೆ . ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೂಜಾರಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪೂಜಾರಿಯ ನೃತ್ಯ
ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ಕಳ್ಳ ಪೂಜಾರಿ ಒತ್ತಾಯ ಮಾಡುತ್ತಾನಂತೆ.ಶಿಡ್ಲಘಟ್ಟ ತಾಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನದ ಪೂಜಾರಿ ಈ ರೀತಿ ಮಾಡುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಸಮಸ್ಯೆಗಳ ನಿವಾರಣೆಗೆ ದೇವಸ್ಥಾನಕ್ಕೆ ಬರುವ ಮಹಿಳೆಯರು ಪೂಜಾರಿಯ ಭಯಕ್ಕೆ ಅವನು ಹೇಳಿದ ಹಾಗೆ ಕೇಳುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಪೂಜಾರಿಯ ಚಳಿ ಬಿಡಿಸುತ್ತಿದ್ದಾರೆ.