ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಮಳೆಯಿಂದ ರಸ್ತೆ ಬಂದ್, ಲಾಠಿ ಹಿಡಿದು ರಸ್ತೆಗಿಳಿದ ತಹಶೀಲ್ದಾರ್

ಆದೇಶ ಮೀರಿ ಜನರು ಟ್ರಾಕ್ಟರ್‌ಗಳಲ್ಲಿ ಹಾಗೂ ಟ್ರಕ್‌ಗಳಲ್ಲಿ ಸಂಚರಿಸಿ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಹೀಗಾಗಿ, ತಹಶೀಲ್ದಾರ್ ಸಿಗ್ಬತ್ತುಲ್ಲಾ ಸ್ವತಃ ಲಾಠಿ ಹಿಡಿದು ರಸ್ತೆಯಲ್ಲಿ ನಿಂತಿದ್ದಾರೆ.

By

Published : Nov 17, 2021, 6:34 PM IST

Updated : Nov 17, 2021, 7:13 PM IST

tahsildar-sigbatullah-ristricted-people-travel-in-gudibande
ಲಾಠಿ ಹಿಡಿದು ರಸ್ತೆಗಿಳಿದ ತಹಶೀಲ್ದಾರ್

ಚಿಕ್ಕಬಳ್ಳಾಪುರ:ಭಾರಿ ಮಳೆಯಿಂದ ಜಿಲ್ಲೆಯ ಸಾಕಷ್ಟು ಕೆರೆ,ಕುಂಟೆಗಳು ತುಂಬಿ ಹರಿಯುತ್ತಿವೆ. ಹೀಗಾಗಿ, ಕೆರೆ ಕೋಡಿ ಏರಿ ಮೇಲೆ ಜನ ಮತ್ತು ವಾಹನಗಳ ಸಂಚಾರಕ್ಕೆ ತಹಶೀಲ್ದಾರ್ ಸಿಗ್ಬತ್ತುಲ್ಲಾ ನಿರ್ಬಂಧ ಹೇರಿದ್ದು, ಸ್ವತಃ ಲಾಠಿ ಹಿಡಿದು ರಸ್ತೆಗಿಳಿದಿದ್ದಾರೆ.


ಗುಡಿಬಂಡೆಯ ಅಮಾನಿಭೈರ ಸಾಗರ ಕೆರೆ (Gudibande Amanibhaira lake) ಕಳೆದ ಎರಡು ತಿಂಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಕೋಡಿ ಹರಿಯುತ್ತಿದೆ. ಕೆರೆ ಕೋಡಿಯೊಂದಿಗೆ ಕೆರೆ ಏರಿಯ ರಸ್ತೆಯ ಮೇಲೆ ನಾಲ್ಕು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು ಜನ ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಗುಡಿಬಂಡೆ ತಹಶೀಲ್ದಾರ್ ಆದೇಶಿಸಿದ್ದಾರೆ.

ಹೀಗಾಗಿ, ಗುಡಿಬಂಡೆ ಪಟ್ಟಣ ಪ್ರವೇಶ ರಸ್ತೆ ಸಂಪರ್ಕ ಬಂದ್ ಆಗಿದೆ. ಕೆರೆ ಕೋಡಿ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಆದೇಶಿಸಲಾಗಿದೆ. ನೀರಿನ ಹರಿವು ಕಡಿಮೆ ಆಗುವವರೆಗೆ ಸಂಚಾರಕ್ಕೆ ನಿರ್ಬಂಧವಿದೆ. ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಆನೇಕಲ್​ನ ಅಪಾರ್ಟ್​ಮೆಂಟ್​ನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ.. ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ

Last Updated : Nov 17, 2021, 7:13 PM IST

ABOUT THE AUTHOR

...view details