ಕರ್ನಾಟಕ

karnataka

ETV Bharat / state

ಚಾರ್ಲಿ ರೀತಿ ಸಾಕು ನಾಯಿಯೊಂದಿಗೆ ಲಡಾಖ್​​​ಗೆ ಪ್ರಯಾಣ ಬೆಳೆಸಿದ ಯುವಕ

ಸಾಕು ನಾಯಿಯೊಂದಿಗೆ ಕೇರಳ ಮೂಲದ ವ್ಯಕ್ತಿಯೊಬ್ಬ ಲಡಾಖ್​ಗೆ ಪ್ರಯಾಣ ಬೆಳೆಸಿದ್ದು ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.

By

Published : Jul 9, 2022, 10:58 PM IST

dog news
ಚಾರ್ಲಿ ರೀತಿ ಸಾಕು ನಾಯಿಯೊಂದಿಗೆ ಲಡಾಖ್ ಪ್ರಯಾಣ ಬೆಳೆಸಿದ ಯುವಕ

ಚಿಕ್ಕಬಳ್ಳಾಪುರ:ಇತ್ತೀಚೆಗೆ ಬಿಡುಗಡೆಯಾದ 777 ಚಾರ್ಲಿ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಸಿನಿಮಾ ಕುರಿತು ಪ್ರೇಕ್ಷಕರು ಬೀದಿನಾಯಗಳನ್ನು ಅಡಾಪ್ಟ್​ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದರು. ಇನ್ನೂ ಕೆಲವರು ಬೀದಿ ನಾಯಿಗಳನ್ನು ಸಾಕಿ ಗಮನ ಸೆಳೆದಿದ್ದರು. ಇದೀಗ ಕೇರಳ ಮೂಲದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ತನ್ನ ನಾಯಿಯೊಂದಿಗೆ ಲಡಾಖ್​ಗೆ ಪ್ರಯಾಣ ಬೆಳೆಸಿದ್ದು,​ ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ಕಂಡು ಬಂದಿದೆ.

ಸುಧೀಶ್ ತನ್ನ ಸಾಕು ನಾಯಿಯೊಂದಿಗೆ ಬೈಕ್‌ನಲ್ಲಿಯೇ ಲಡಾಖ್​ಗೆ ಪ್ರಯಾಣ ಬೆಳಸಿದ್ದಾರೆ. ಇನ್ನು ಕೇರಳ ದಿಂದ ಸರಿಸುಮಾರು 8 ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಸ್ಥಳಕ್ಕೆ ಹೋಗಲು ಬೈಕ್‌ನ ಹಿಂಬದಿಯ ಸೀಟಿನಲ್ಲಿ ಸಾಕು ನಾಯಿಗೆ ಮಲಗಲು ಹಾಗೂ ಕುಳಿತುಕೊಳ್ಳಲು ಆಸನ ಸಿದ್ದಪಡಿಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಬೆಂಗಳೂರು ಮಾರ್ಗವಾಗಿ ಲಡಾಖ್​​ಗೆ ಪ್ರಯಾಣ ಬೆಳೆಸಿದ್ದು, ಮಾರ್ಗಮಧ್ಯದಲ್ಲಿ ನೋಡುಗರ ಗಮನ ಸೆಳೆದಿದ್ದಾರೆ. ಕೆಲವರು ಸೆಲ್ಪಿ ತಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಸುಧೀಶ್ ಕಳೆದ ವರ್ಷ ಇದೇ ನಾಯಿಯೊಂದಿಗೆ ಲಡಾಖ್​ ಹೋಗಿ ಬಂದಿದ್ದರು

ಇದನ್ನೂ ಓದಿ:ಶೇರಾ - ಲಾಲುಗೆ ಭಾರಿ ಬೇಡಿಕೆ: 1.5 ಲಕ್ಷದ ಈ ಭೂಪ ಯಾರು?

For All Latest Updates

TAGGED:

ABOUT THE AUTHOR

...view details