ಚಿಕ್ಕಬಳ್ಳಾಪುರ:ಚಿನ್ನದಂಗಡಿಗೆ ಬಂದು ಗ್ರಾಹಕಿಯ ಬ್ಯಾಗ್ನ್ಲಲಿದ್ದ ಚಿನ್ನ ಕದ್ದು ಮಹಿಳೆಯೊಬ್ಬರು ಪರಾರಿಯಾಗಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಊನೇಗಲ್ ಗ್ರಾಮದ ರೂಪಾ ಆಭರಣ ಕಳೆದುಕೊಂಡ ಮಹಿಳೆ. ನಗರದ ಗಂಗಮ್ಮ ಗುಡಿ ರಸ್ತೆಯ ಚೇತನ್ ಜ್ಯುವೆಲ್ಲರ್ಸ್ನಲ್ಲಿ ಚಿನ್ನಾಭರಣ ರಿಪೇರಿ ಮಾಡಿಸಿಕೊಂಡು ಚಿನ್ನದ ಸರ ಖರೀದಿಸುವ ವೇಳೆ ಗ್ರಾಹಕರ ಸೋಗಿನಲ್ಲಿ ತಾಯಿ-ಮಗಳು ಬಂದು ಚಿನ್ನಾಭರಣವಿದ್ದ ಬ್ಯಾಗ್ ಕಳ್ಳತನ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಖರೀದಿ ನೆಪದಲ್ಲಿ ಚಿನ್ನ ಕದ್ದು ಮಹಿಳೆ ಪರಾರಿ
ಚಿನ್ನ ಖರೀದಿಸುತ್ತಿದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿನ್ನ ಖರೀದಿಸುವ ನೆಪದಲ್ಲಿ ಬ್ಯಾಗ್ ಕದ್ದು ಪಾರಾರಿಯಾದ ಮಹಿಳೆ
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ:ಬಾಗಲಕೋಟೆ-ವಿಜಯಪುರದಲ್ಲಿ ಜೋರು ಮಳೆ: ಸಿಡಿಲು ಬಡಿದು ಯುವಕ, ಎತ್ತುಗಳು ಬಲಿ