ಕರ್ನಾಟಕ

karnataka

ETV Bharat / state

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ: ಒಂದೇ ಗ್ರಾಮದಲ್ಲಿ 2 ಸಾವಿರಕ್ಕೂ ಅಧಿಕ ಜನ ಬಿಜೆಪಿ ಸೇರ್ಪಡೆ, ಇತಿಹಾಸ ಸೃಷ್ಟಿಸಲಿದೆಯಾ ಬಿಜೆಪಿ?.. - May 13

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಏನಿಗದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು 2000ಕ್ಕೂ ಹೆಚ್ಚು ಗ್ರಾಮಸ್ಥರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

join bjp
ಬಿಜೆಪಿ ಸೇರ್ಪಡೆ

By

Published : May 2, 2023, 12:25 PM IST

Updated : May 2, 2023, 1:09 PM IST

ಏನಿಗದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಸೇರ್ಪಡೆ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆಯಾಗಿದ್ದಂತಹ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಕೇಸರಿಮಯವನ್ನಾಗಿ ಮಾಡಲು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಸರಿ ಸುಮಾರು 2000 ಕ್ಕೂ ಅಧಿಕ ಜನ ಗ್ರಾಮಸ್ಥರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಂತಹ ಘಟನೆ ಇಂದು ನಡೆದಿದೆ.

ಹೌದು ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿಲಕಲನೆರ್ಪು ಹೋಬಳಿಯ ಏನಿಗದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಮಾಜಿ ಶಾಸಕರಾದ ರಾಜಣ್ಣ, ಕೋನಪ್ಪ ರೆಡ್ಡಿ(ಒಕ್ಕಲಿಗರ ಸಂಘದ ಅಧ್ಯಕ್ಷರು),ವೈ ನಾರಾಯಣ ಸ್ವಾಮಿ, ಮಿಟ್ಟಹಳ್ಳಿ ಶ್ರೀರಾಮರೆಡ್ಡಿ, ಬಾಲರೆಡ್ಡಿಪಳ್ಳಿ ಪ್ರಸಾದ್ ರೆಡ್ಡಿ, ಚೋಕನಹಳ್ಳಿ ಆನಂದ್ ರೆಡ್ಡಿ, ಏನಿಗದಲೆ ಆನಂದ್ ರೆಡ್ಡಿ ಅವರ ನೇತೃತ್ವದಲ್ಲಿ ಇಂದು 2000ಕ್ಕೂ ಹೆಚ್ಚು ಗ್ರಾಮಸ್ಥರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಪಕ್ಷದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರು ಹೋದ ಕಡೆಯಲ್ಲೆಲ್ಲ ಒಂದೊಂದು ಗ್ರಾಮವನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ. ಬೃಹತ್ ವೇದಿಕೆಯಲ್ಲಿ ಹತ್ತಾರು ನಾಯಕರ ಸಮ್ಮುಖದಲ್ಲಿ ಎಲ್ಲರಿಗೂ ಸಹ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಏನಿಗದಲೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ, ಹೂ ಮಳೆಗರೆದು, ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಮ್ಮ ನಾಯಕನನ್ನು ಸ್ವಾಗತಿಸಿದರು. ಸೀಕಲ್ ರಾಮಚಂದ್ರ ಗೌಡರು ಮಾತನಾಡಿ, ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಶಿಡ್ಲಘಟ್ಟ ಇನ್ನು 50 ವರ್ಷಗಳ ಕಾಲ ಹಿಂದುಳಿಯಲಿದೆ.

ಯೋಚಿಸಿ ಮತ ನೀಡಿ. ಕಳೆದ ಯಾವುದೇ ಸರ್ಕಾರದ ಕಾಲದಲ್ಲೂ ಮಾಡದ ಕೆಲಸವನ್ನು ಕೇವಲ 5 ವರ್ಷಗಲ್ಲಿ ಮಾಡುತ್ತೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಅತ್ಯವಶ್ಯಕ ಎಂದು ಮತಯಾಚನೆ ನಡೆಸಿದ್ದಾರೆ. ಮಾಜಿ ಶಾಸಕರಾದ ಎಂ ರಾಜಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಮತ್ತು ಮೋದಿ ಅವರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದರು. ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಕಿಸಾನ್​ ಸಮ್ಮಾನ್ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಪೆನ್ಷನ್ ಸ್ಕೀಮ್ ಗಳ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಕ್ಷೇತ್ರದ ಮತವನ್ನೆಲ್ಲ ತಮ್ಮ ಬುಟ್ಟಿಗೆ ಬೀಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡ ದಾಸರಹಳ್ಳಿ ಟಿಕೆಟ್ ಆಕಾಂಕ್ಷಿ:ಏಪ್ರಿಲ್​ 28 ರಂದು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹಾಗೂ ದಾಸರಹಳ್ಳಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ.ಎನ್ ಕೃಷ್ಣಮೂರ್ತಿ ಹಾಗು ಕೊರಟಗೆರೆ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಇವರು ಸಚಿವ ಮುನಿರತ್ನ, ಸಚಿವ ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸೇರ್ಪಡೆಗೊಂಡರು.

ಸೇರ್ಪಡೆಗೊಂಡ ಕೃಷ್ಣಮೂರ್ತಿ ಆ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಒಗ್ಗಟ್ಟಿದೆ, ನಾಯಕತ್ವ ಇದೆ. ಅಶ್ವತ್ಥ ನಾರಾಯಣ್ ಹಾಗೂ ಮುನಿರತ್ನ ಅವರ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದೇವೆ. ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಬಿಜೆಪಿ ಸೇರ್ಪಡೆ ಆಗಿದ್ದೇನೆ. 2013ರಲ್ಲಿ ಡಿಕೆ ಶಿವಕುಮಾರ್ ಅವರು ಕನಕಪುರದ ಬಂಡೆ ಅಂತೆಲ್ಲ ಹೇಳಿದ್ದೀರಿ. ನಿಜವಾಗಿ ಹೇಳಬೇಕೆಂದರೆ ಅವರು ಒಕ್ಕಲಿಗ ವಿರೋಧಿ. 2013ರಿಂದ ಸತತವಾಗಿ ಕೆಲಸ ಮಾಡಿಕೊಂಡು ಬಂದರೂ ಟಿಕೆಟ್ ನೀಡಲಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ನೇರಪ್ರಸಾರ

Last Updated : May 2, 2023, 1:09 PM IST

ABOUT THE AUTHOR

...view details