ಕರ್ನಾಟಕ

karnataka

ಗುಂಡ್ಲುಪೇಟೆ ತಾಲೂಕು ಆಡಳಿತ ನಿರ್ಲಕ್ಷ್ಯ.. ಜಮೀನಿನಲ್ಲೇ ಗಾರೆ ಕೆಲಸಗಾರರು ಕ್ವಾರಂಟೈನ್​

ಮಹಿಳೆಯ ತೋಟದ ಮನೆಗೆ ಗಾರೆ ಕೆಲಸಕ್ಕೆ ಹೋಗಿದ್ದ ಈ ಇಬ್ಬರು ಗಾರೆ ಕೆಲಸಗಾರರು, ಕೊರೊನಾ ಭೀತಿಯಿಂದಾಗಿ ಕಡಲೆಕಾಯಿ ಹೊಲದಲ್ಲಿನ ಶೆಡ್​ನಲ್ಲಿ ಕ್ವಾರಂಟೈನ್ ಆಗಿದ್ದು, ಮನೆಯವರಿಂದ ಊಟ ತರಿಸಿಕೊಳ್ಳುತ್ತಿದ್ದಾರೆ..

By

Published : Jul 14, 2020, 4:15 PM IST

Published : Jul 14, 2020, 4:15 PM IST

ಜಮೀನಿನಲ್ಲೇ ಗಾರೆ ಕೆಲಸಗಾರರ ಕ್ವಾರಂಟೈನ್​
ಜಮೀನಿನಲ್ಲೇ ಗಾರೆ ಕೆಲಸಗಾರರ ಕ್ವಾರಂಟೈನ್​

ಚಾಮರಾಜನಗರ: ಗಾರೆ ಕೆಲಸಗಾರರಿಬ್ಬರು ಜಮೀನಿನಲ್ಲೇ ಕ್ವಾರಂಟೈನ್ ಆಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಮೂಖಹಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನಶೆಟ್ಟರಹುಂಡಿಯಲ್ಲಿ ನಡೆದಿದೆ.

ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ 4 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮಹಿಳೆಯ ತೋಟದ ಮನೆಗೆ ಗಾರೆ ಕೆಲಸಕ್ಕೆ ಹೋಗಿದ್ದ ಈ ಇಬ್ಬರು ಗಾರೆ ಕೆಲಸಗಾರರು, ಕೊರೊನಾ ಭೀತಿಯಿಂದಾಗಿ ಕಡಲೆಕಾಯಿ ಹೊಲದಲ್ಲಿನ ಶೆಡ್​ನಲ್ಲಿ ಕ್ವಾರಂಟೈನ್ ಆಗಿದ್ದು, ಮನೆಯವರಿಂದ ಊಟ ತರಿಸಿಕೊಳ್ಳುತ್ತಿದ್ದಾರೆ.

ಜಮೀನಿನಲ್ಲೇ ಗಾರೆ ಕೆಲಸಗಾರರ ಕ್ವಾರಂಟೈನ್​

ಇಬ್ಬರು ಸಹ ಸೋಂಕಿತ ಮಹಿಳೆಯೊಂದಿಗೆ ನೇರ ಸಂಪರ್ಕಕ್ಕೆ ಬಂದಿಲ್ಲವಾದರೂ ಆಕೆಯ ಪ್ರಾಥಮಿಕ ಸಂಪರ್ಕಿತನಾದ ಪತಿಯೊಂದಿಗೆ ಹೆಚ್ಚು ಬೆರೆತಿದ್ದಾರೆ. ಆದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕುಟುಂಬದ ಸದಸ್ಯರಿಂದ ದೂರ ಉಳಿಯಲು ಹೊಲದಲ್ಲೇ ವಾಸ್ತವ್ಯ ಹೂಡಿದ್ದಾರೆ.

ಮಹಿಳೆಯ ಮನೆಗೆ ಕೃಷಿ ಕೆಲಸಕ್ಕೆ ಹೋಗಿದ್ದ ಮೂವರು ಮಹಿಳೆಯರು ತಮ್ಮ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಒಂದೇ ಮನೆಯಲ್ಲಿ ಮೂವರೂ ಇದ್ದಾರೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಸಂಪರ್ಕಿತರ ಮೇಲೆ ನಿಗಾ ಇಡಬೇಕಿದ್ದ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ತಾಲೂಕಿನಲ್ಲಿ ಹೆಚ್ಚುತ್ತಿದ್ದರೂ ತಾಲೂಕು ಆಡಳಿತ ಎಚ್ಚೆತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ABOUT THE AUTHOR

...view details