ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ನಕಲಿ ಚಿನ್ನ‌ ಕೊಟ್ಟು ವಂಚಿಸುತ್ತಿದ್ದ ಮಹಿಳೆಯರ ಬಂಧನ, 3 ಪ್ರಕರಣ ಬೆಳಕಿಗೆ

ಚಿನ್ನಾಭರಣದ ಅಂಗಡಿಗಳಿಗೆ ನಕಲಿ ಚಿನ್ನಾಭರಣಗಳನ್ನು ನೀಡಿ ಮೋಸ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

womens-arrested-for-giving-fake-gold-in-kollegal
ಕೊಳ್ಳೇಗಾಲ : ನಕಲಿ ಚಿನ್ನ‌ ಕೊಟ್ಟು ವಂಚಿಸುತ್ತಿದ್ದ ಮಹಿಳೆಯರ ಬಂಧನ, 3 ಪ್ರಕರಣ ಬೆಳಕಿಗೆ

By

Published : Sep 27, 2022, 4:18 PM IST

ಚಾಮರಾಜನಗರ: ಮೊದಲು ಅಸಲಿ ಚಿನ್ನ ತೋರಿಸಿ ಬಳಿಕ ಆಭರಣ ವ್ಯಾಪಾರಿಗಳಿಗೆ ತಿಳಿಯದಂತೆ ನಕಲಿ ಚಿನ್ನ ಕೊಟ್ಟು ಯಾಮಾರಿಸುತ್ತಿದ್ದ ಇಬ್ಬರು ಅಂತರ್​ರಾಜ್ಯ ಕಳ್ಳಿಯರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ‌ ಸೇಲಂ‌ ಮೂಲದ ಧನಂ(54) ಹಾಗೂ ವಸಂತ(36) ಬಂಧಿತ ಮಹಿಳೆಯರು.

ಕೊಳ್ಳೇಗಾಲ : ನಕಲಿ ಚಿನ್ನ‌ ಕೊಟ್ಟು ವಂಚಿಸುತ್ತಿದ್ದ ಮಹಿಳೆಯರ ಬಂಧನ, 3 ಪ್ರಕರಣ ಬೆಳಕಿಗೆ

ಕೆಲವು ದಿನಗಳ ಹಿಂದೆಯಷ್ಟೆ ಕೊಳ್ಳೇಗಾಲದ ವೈವಿಧ್ಯ ಜುವೆಲರ್ಸ್ ನಲ್ಲಿ ವ್ಯಾಪಾರ ಮಾಡಲು ಬಂದ ಈ‌ ಇಬ್ಬರು ಮಹಿಳೆಯರು ಮೊದಲು ಅಸಲಿ ಒಡವೆಗಳನ್ನು ತೋರಿಸಿ ಬಳಿಕ ಮಾಲೀಕನಿಗೆ ತಿಳಿಯದಂತೆ ನಕಲಿ ಚಿನ್ನ‌ ಕೊಟ್ಟು ಬರೋಬ್ಬರಿ 71 ಗ್ರಾಂ ಚಿನ್ನ ಖರೀದಿಸಿ ಯಾಮಾರಿಸಿದ್ದರು.‌

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ‌ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಈ ಇಬ್ಬರನ್ನು ಬಂಧಿಸಿದ್ದಾರೆ.‌ ಜೊತೆಗೆ, 151 ಗ್ರಾಂ‌ ಚಿನ್ನ ವಶಪಡಿಸಿಕೊಂಡಿದ್ದು, ಇದೇ ರೀತಿ, ಇವರ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಮೋಸ ಮಾಡುತ್ತಿದ್ದುದು ಹೇಗೆ : ಮೊದಲು ಆಭರಣದಂಗಡಿಗೆ‌ ಭೇಟಿ ಕೊಡುತ್ತಿದ್ದ ಈ‌ ಇಬ್ಬರು, ಮೊದಲು ತಮ್ಮಲ್ಲಿರುವ ಅಸಲಿ ಚಿನ್ನವನ್ನು ತೋರಿಸಿ ಟೆಸ್ಟ್​ ಮಾಡಿಸುತ್ತಿದ್ದರು. ಬಳಿಕ, ನಮ್ಮ ಮನೆಯವರನ್ನು ಕರೆದುಕೊಂಡು ಬರುತ್ತೇನೆ, ಅವರು ‌ಹೊರಗಡೆ ನಿಂತಿದ್ದಾರೆ‌ ಎಂದು ಹೇಳಿ ಅಂಗಡಿಯಿಂದ ಹೊರ ಹೋಗಿ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನವನ್ನು ತಂದು ಚಿನ್ನದಂಗಡಿ ಅವರಿಗೆ ಕೊಡುತ್ತಿದ್ದರು.‌

ಮೊದಲೇ ಟೆಸ್ಟ್ ಮಾಡಿದ್ದೇವೆ ಎಂದು ಕೊಳ್ಳುತ್ತಿದ್ದ ಆಭರಣದ ಅಂಗಡಿಯವರು ಅಸಲಿ ಎಂದು ನಕಲಿ ಚಿನ್ನವನ್ನು ಪಡೆದು ಮೋಸ ಹೋಗುತ್ತಿದ್ದರು. ಬಳಿಕ ಹೊಸ ವಿನ್ಯಾಸವನ್ನು ಪಡೆವ ಕಳ್ಳಿಯರು, ತಮ್ಮ ಕೆಲಸವಾದ ಮೇಲೆ ಸ್ಥಳದಿಂದ ಪರಾರಿಯಾಗುತ್ತಿದ್ದರು.

ಇದನ್ನೂ ಓದಿ :ಸಿಂತಪಲ್ಲಿಯಿಂದ ಸಿಲಿಕಾನ್ ಸಿಟಿಗೆ ಮಾದಕ ವಸ್ತು ಸರಬರಾಜು: ನಾಲ್ವರು ಮಹಿಳೆಯರು ಸಿಸಿಬಿ ಬಲೆಗೆ

ABOUT THE AUTHOR

...view details