ಚಾಮರಾಜನಗರ:ರಾಜ್ಯದೆಲ್ಲೆಡೆ ಮುಂಗಾರು ಮಳೆ ಉತ್ತಮವಾಗಿದ್ದು ರೈತರ ಸಂತಸ ಹೆಚ್ಚಿಸಿದೆ. ಇನ್ನು ಜಿಲ್ಲೆಯ ಅನ್ನದಾತರ ಮೊಗದಲ್ಲಿ ಇನ್ನೊಂದು ಕಾರಣಕ್ಕೆ ಮಂದಹಾಸ ಮೂಡಿದೆ.
ವಡ್ಡಗೆರೆ ಕೆರೆಗೆ ಬಂತು ನೀರು: ಅನ್ನದಾತರ ಮೊಗದಲ್ಲಿ ಅರಳಿತು ನಗು - ಅನ್ನದಾತ
ರಾಜ್ಯದೆಲ್ಲೆಡೆ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರ ಖುಷಿ ಹೆಚ್ಚಿಸಿದೆ. ಚಾಮರಾಜನಗರದ ರೈತರು ಇನ್ನೂ ಸಂತಸಗೊಂಡಿದ್ದಾರೆ.
ಇಷ್ಟು ದಿನ ಅಹೋರಾತ್ರಿ ಪ್ರತಿಭಟನೆ ಮತ್ತು ಟ್ರಯಲ್ ರನ್ ಬಳಿಕವೂ ನೀರು ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಈ ಕಾರಣಕ್ಕಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಆದ್ರೀಗ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ಜೀವಜಲ ಹರಿದಿದೆ. ಎಂಜಿನಿಯರ್ ನೇತೃತ್ವದಲ್ಲಿ ಜೆಸಿಬಿ ಮೂಲಕ ಹಳ್ಳಗಳನ್ನು ತೋಡಿದ್ದಕ್ಕೆ ಕೆರೆಗೆ ನೀರು ಹರಿದಿದ್ದು, ರೈತರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಚಿಕ್ಕಚಿಕ್ಕ ಹಳ್ಳಗಳು ತುಂಬಿ ಈಗ ಕೆರೆ ಮೈದುಂಬುತ್ತಿದ್ದು ಯುವಕರು ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ.
ವಡ್ಡಗೆರೆವರೆಯವರೆಗೆ ಪೈಪ್ಲೈನ್ ಅಳವಡಿಸಲಾಗಿದ್ದು,ಕರಿಕಲ್ಲುಮಾದಳ್ಳಿ, ಬೊಮ್ಮಲಾಪುರ, ಕೋಡಹಳ್ಳಿ ಈ ಭಾಗದ ಕಾಮಗಾರಿ ಬಾಕಿ ಉಳಿದಿದೆ. ಇನ್ನು ಕಾಲುವೆ ಮೂಲಕವೇ 30 ದಿನ ನೀರು ಹರಿಸಬೇಕೆಂಬುದು ರೈತರ ಬೇಡಿಕೆಯಾಗಿದೆ.