ಚಾಮರಾಜನಗರ:ಮತದಾರರೊಬ್ಬರು ಮತಪೆಟ್ಟಿಗೆಗೆ ಮತ ಹಾಕುವ ಜೊತೆಗೆ ಬೇಡಿಕೆ ಪತ್ರ ಕೂಡ ಹಾಕಿರುವುದು ಮತ ಎಣಿಕೆ ವೇಳೆ ಬಯಲಾಗಿದೆ. ವಿಧಾನ ಪರಿಷತ್ನ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ವೇಳೆ ಪತ್ರ ನೋಡಿ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.
ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬುವರು ಮತಪೆಟ್ಟಿಗೆಯಲ್ಲಿ ಮನವಿ ಪತ್ರ ಹಾಕಿದ್ದಾರೆ ಎಂದು ತಿಳಿದುಬಂದಿದೆ. 'ತಾನು ಕಷ್ಟದಲ್ಲಿ BA, BEd, MA ಮಾಡಿದ್ದು 1.20 ಗುಂಟೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ಅಂಬೇಡ್ಕರ್ ನಿಗಮದಿಂದ ತನಗೊಂದು ಕೊಳವೆಬಾವಿ ತೋಡಿಸಿಕೊಡಿ ಇಲ್ಲದಿದ್ದರೇ ಸರ್ಕಾರಿ ನೌಕರಿ ಕೊಡಿಸಿ, ಚುನಾವಣೆ ಇಲಾಖೆಯು ತನ್ನ ಹೆಸರನ್ನು ಗೌಪ್ಯವಾಗಿಟ್ಟು ಸರ್ಕಾರಕ್ಕೆ ಮನವಿ ತಲುಪಿಸಲಿ' ಎಂದು ಮತದಾರ ಪತ್ರದಲ್ಲಿ ಕೋರಿಕೊಂಡಿದ್ದಾರೆ.