ಕರ್ನಾಟಕ

karnataka

ETV Bharat / state

ವೈಕುಂಠ ಏಕಾದಶಿ : ಬಿ ಆರ್ ಹಿಲ್ಸ್ ಗೆ ಕೇಂದ್ರ ಅರಣ್ಯ ಸಚಿವರ ಭೇಟಿ - ETv Bharat Karnataka

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್- ವೈಕುಂಠ ಏಕಾದಶಿ ಹಿನ್ನೆಲೆ ಬಿಳಿಗಿರಿರಂಗನನಾಥ ದೇವಾಲಯಕ್ಕೆ ಭೇಟಿ- ವಿಶೇಷ ಪೂಜೆ ಸಲ್ಲಿಸಿದ ಸಚಿವರು

Union Forest and Environment Minister Bhupendra Yadav
ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್

By

Published : Jan 2, 2023, 5:37 PM IST

ಚಾಮರಾಜನಗರ :ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಇಂದು ಯಳಂದೂರು ತಾಲೂಕಿನ‌ ಬಿಳಿಗಿರಿರಂಗನನಾಥ ದೇವಾಲಯಕ್ಕೆ ಭೇಟಿ ಕೊಟ್ಟರು.

ವೈಕುಂಠ ಏಕಾದಶಿ ಹಿನ್ನೆಲೆ ವಿಷ್ಣು ದೇವಾಲಯವಾದ ಬಿಳಿಗಿರಿಬನಕ್ಕೆ ಭೇಟಿ ಕೊಟ್ಟು ರಂಗನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು, ಇದಕ್ಕೂ ಮೊದಲು ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಅರಣ್ಯ ಸಚಿವರು ಸಫಾರಿ ನಡೆಸಿದ್ದಾರೆ. ಮಂಗಳವಾರ ಬಂಡೀಪುರದಲ್ಲಿ ಎನ್​ಟಿಸಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕಾಡು ನಾರಾಯಣ ದೇವಾಲಯಕ್ಕೆ ಭಕ್ತ ಸಾಗರ:ಚಾಮರಾಜನಗರ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಚಾಮರಾಜನಗರದ ಕಾಡು ನಾರಾಯಣಸ್ವಾಮಿ ದೇವಾಲಯ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನಾಥನ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ.

ಚಾಮರಾಜನಗರದಲ್ಲಿನ ಕಾಡು ನಾರಾಯಣಸ್ವಾಮಿ ದೇವಾಲಯದಲ್ಲಿ ಸಪ್ತದ್ವಾರ ನಿರ್ಮಾಣ ಮಾಡಲಾಗಿದ್ದು, ಏಳು ದ್ವಾರ ದಾಟಿ ದೇವರ ದರ್ಶನ ಪಡೆಯಲು ಭಕ್ತರು ಬಂದಿದ್ದರು. ವೈಕಂಠ ದ್ವಾರದ ಮೂಲಕ ಶ್ರೀದೇವಿ, ಭೂದೇವಿ ಸಮೇತ ನಾರಾಯಣಸ್ವಾಮಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ :ಕರಡಿಧಾಮಗಳ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ: ಕೇಂದ್ರಕ್ಕೆ ಸಿಎಂ ಮನವಿ

ABOUT THE AUTHOR

...view details