ಕರ್ನಾಟಕ

karnataka

ETV Bharat / state

ಹೊಗೆನಕಲ್ ಫಾಲ್ಸ್​ನಲ್ಲಿ ಮುಳುಗಿ ತಮಿಳುನಾಡಿನ ಇಬ್ಬರು ಯುವಕರು ಸಾವು - Hogenakal Falls chamarajanagara

ತಮಿಳುನಾಡಿನ ಇಬ್ಬರು ಯುವಕರು ಹೊಗೆನಕಲ್ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹೊಗೆನಕಲ್ ಫಾಲ್ಸ್
ಹೊಗೆನಕಲ್ ಫಾಲ್ಸ್

By

Published : Jul 23, 2023, 9:44 AM IST

Updated : Jul 23, 2023, 10:16 AM IST

ಚಾಮರಾಜನಗರ:ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಶನಿವಾರ ನಡೆದಿದೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ನಿವಾಸಿಗಳಾದ ಶಬರಿ (24) ಮತ್ತು ಅಜಿತ್ (26) ಮೃತರು. ಕಳೆದ ಎರಡು ದಿನಗಳ ಹಿಂದೆ 15 ಜನರಿದ್ದ ಗುಂಪು ಇಲ್ಲಿಗೆ ಪ್ರವಾಸ ಕೈಗೊಂಡಿದ್ದರು. ತಮಿಳುನಾಡಿನ ಪಳನಿ, ಕೊಡೆಕೆನಾಲ್ ಭೇಟಿ ಮುಗಿಸಿ ಶನಿವಾರ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ ಹೊಗೆನಕಲ್ ಜಲಪಾತಕ್ಕೆ ಆಗಮಿಸಿದ್ದರು.

ಅಜಿತ್ ಮತ್ತು ಶಬರಿ ಈಜಲು ಹೋದವರು ಮತ್ತೆ ವಾಪಸ್ ಬಂದಿರಲಿಲ್ಲ. ವಿಚಾರ ತಿಳಿದ ಸ್ನೇಹಿತರು ಹಾಗೂ ಸ್ಥಳೀಯರು ಮಲೆ ಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ನುರಿತ ಈಜುಗಾರರ ಸಹಾಯದಿಂದ ಬಲೆ ಹಾಕಿ ಇಬ್ಬರ ಶವ ಪತ್ತೆ ಮಾಡಲಾಗಿದೆ. ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಾ ನದಿಯಲ್ಲಿ ಬಾಲಕರಿಬ್ಬರು ಸಾವು:ಕಲಬುರಗಿಯಲ್ಲಿ ಭೀಮಾ ನದಿಗೆ ಬಾಲಕರಿಬ್ಬರು ಈಜಲು ಹೋಗಿ ಮುಳುಗಿ ಈ ತಿಂಗಳಾರಂಭದಲ್ಲಿ ಸಾವನ್ನಪ್ಪಿದ್ದರು. ದೇವಿಂದ್ರ ಹೊಸಮನಿ (17) ಹಾಗೂ ರಾಮು ದೊಡ್ಡಮನಿ (13) ಮೃತರು. ಇಬ್ಬರು ಈಜಲು ತೆರಳಿದ್ದು ಓರ್ವ ಕಾಲು ಜಾರಿ ನೀರು ಪಾಲಾಗುತ್ತಿದ್ದಂತೆ ಇನ್ನೋರ್ವ ರಕ್ಷಣೆಗೆ ಇಳಿದಿದ್ದ. ಆಗ ಆತ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ನೋಡಿದ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ:ಕೊಳದಲ್ಲಿ ಮುಳುಗಿ ನಾಲ್ವರು ಶಾಲಾ ಬಾಲಕಿಯರು ಸಾವು!

ಐವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು: ಜುಲೈ 8ರಂದು ಉತ್ತರ ಪ್ರದೇಶದ ರಾಯ್​ ಬರೇಲಿ ಜಿಲ್ಲೆಯಲ್ಲಿ ಕೆರೆಗೆ ಈಜಲು ತೆರಳಿದ್ದ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿತ್ತು. ತಕ್ಷಣವೇ ಸುತ್ತಮುತ್ತಲ ಜನರು ಕೆರೆಗೆ ಧಾವಿಸಿ ಮಕ್ಕಳ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ಹೊರ ತೆಗೆಯುವಷ್ಟರಲ್ಲಿ ಐವರ ಪ್ರಾಣಪಕ್ಷಿಯೂ ಹಾರಿಹೋಗಿತ್ತು.

ನಂದಿ ಬೆಟ್ಟಕ್ಕೆ ಬಂದಿದ್ದ ಯುವಕರು ಕೆರೆಯಲ್ಲಿ ಮುಳುಗಿ ಸಾವು:ಬೆಂಗಳೂರಿನ ಆರ್​.ಟಿ.ನಗರದ ಯುವಕರ ತಂಡ ಮೇ 28ರಂದು ಬೆಳಗ್ಗೆ ನಂದಿಬೆಟ್ಟಕ್ಕೆ ಬೈಕ್​ನಲ್ಲಿ ಬಂದಿದ್ದರು. ಮಧ್ಯಾಹ್ನ ನಂದಿಬೆಟ್ಟದಿಂದ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿದ್ದು, ಮುಳುಗಿ ಸಾವನ್ನಪ್ಪಿದ್ದರು. ಕೆರೆ ದಂಡೆಯಲ್ಲಿ ನಿಂತಿದ್ದ ಬೈಕ್​ಗಳು ಮತ್ತು ಯುವಕರ ಬಟ್ಟೆಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಬಳಿಕ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು.

ಇದನ್ನೂ ಓದಿ:ಕೆರೆಗೆ ಈಜಲು ಹೋಗಿದ್ದ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Last Updated : Jul 23, 2023, 10:16 AM IST

ABOUT THE AUTHOR

...view details