ಕರ್ನಾಟಕ

karnataka

ವಿಭಿನ್ನ ಷಷ್ಠಿ: ಹಾವಿನ ಹುತ್ತಕ್ಕೆ ಹಾಲಲ್ಲ ಕೋಳಿ ರಕ್ತ, ಮೊಟ್ಟೆ

ಚಾಮರಾಜನಗರದ ವಿವಿಧ ತಾಲೂಕುಗಳಲ್ಲಿ ಷಷ್ಠಿ ಹಿನ್ನೆಲೆಯಲ್ಲಿ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ಜೊತೆಗೆ ಕೋಳಿ ರಕ್ತ, ಮೊಟ್ಟೆಯನ್ನು ಎರೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೀಗೆ ಮಾಡುವ ಮೂಲಕ ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.

By

Published : Nov 29, 2022, 2:30 PM IST

Published : Nov 29, 2022, 2:30 PM IST

ಹಾವಿನ ಹುತ್ತಕ್ಕೆ ಬರೀ ಹಾಲಲ್ಲ ಕೋಳಿ ರಕ್ತ
ಹಾವಿನ ಹುತ್ತಕ್ಕೆ ಬರೀ ಹಾಲಲ್ಲ ಕೋಳಿ ರಕ್ತ

ಚಾಮರಾಜನಗರ: ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಸಾಮಾನ್ಯ. ಆದರೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೋಳಿ ರಕ್ತ, ಮೊಟ್ಟೆಯನ್ನು ಎರೆಯುವ ಪರಿಪಾಠ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.

ಹಾವಿನ ಹುತ್ತಕ್ಕೆ ಬರೀ ಹಾಲಲ್ಲ ಕೋಳಿ ರಕ್ತ, ಮೊಟ್ಟೆ

ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಪೂಜೆಯಾಗುವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ ಎನ್ನುತ್ತಾರೆ ನಗರದ ಉಪ್ಪಾರ ಯುವಕರ ಸಂಘದ ಜಯಕುಮಾರ್.

ಇದನ್ನೂ ಓದಿ:ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ಅಧಿಕಾರಿ.. ಪರಿಸ್ಥಿತಿ ಮುಂದೇನಾಯ್ತು ನೋಡಿ

ಈ ರೀತಿ ಕೋಳಿ ಬಲಿಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ. ಇಷ್ಟಾರ್ಥ ಈಡೇರಿದ ಬಳಿಕ ನಾಗಪ್ಪನಿಗೆ ಕೋಳಿ ಬಲಿ ಕೊಟ್ಟು ಹರಕೆ ತೀರಿಸುತ್ತೇವೆ ಎಂಬುದು ಭಕ್ತರ ನಂಬಿಕೆ.

ABOUT THE AUTHOR

...view details