ಕರ್ನಾಟಕ

karnataka

ETV Bharat / state

ಚಾಮರಾಜನಗರಕ್ಕೆ ಕೊರೊನಾ ಮುಕ್ತ ನಗರ ಗರಿ : ಕೊರೊನಾ ವಾರಿಯರ್ಸ್​ಗೆ ಹೂಮಳೆ !

ಜಿಲ್ಲಾಡಳಿತ ಭವನದಿಂದ ಪಚ್ಚಪ್ಪ ವೃತ್ತಕ್ಕೆ ಸೈಕಲ್ ಸವಾರಿ ಮೂಲಕ ಸಾಮಾನ್ಯರಂತೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್, ಶಾಸಕರಾದ ಮಹೇಶ್ ಹಾಗೂ ಪುಟ್ಟರಂಗಶೆಟ್ಟಿ. ಡಿಸಿ , ಜಿಪಂ ಸಿಇಒ, ಎಸ್​ಪಿ, ನರ್ಸ್​ಗಳು, ಪೊಲೀಸರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರು, ಅಗ್ನಿಶಾಮಕ ದಳ ಮತ್ತು ಪೌರ ಕಾರ್ಮಿಕರಿಗೆ ಸಿಬ್ಬಂದಿಗೆ ಪುಷ್ಪ ಮಳೆ ಸುರಿಸಿ ಅಭಿಮಾನ ಮೆರೆದರು.

By

Published : Apr 25, 2020, 2:40 PM IST

chamarajnagar
ಚಾಮರಾಜನಗರಕ್ಕೆ ಕೊರೊನಾ ಮುಕ್ತ ನಗರ ಎಂಬ ಗರಿ

ಚಾಮರಾಜನಗರ : ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರಿದ್ದರೂ ಚಾಮರಾಜನಗರ ಜಿಲ್ಲೆಗೆ ಸೋಂಕು ಬಾರದಂತೆ ತಡೆದ ಕೊರೊನ ಯೋಧರಿಗೆ ಜಿಲ್ಲಾಡಳಿತ, ಹಾಗೂ ಜನ ಪ್ರತಿನಿಧಿಗಳು ಹೂಮಳೆ ಸುರಿಸಿ ಕೃತಜ್ಞತೆ ತಿಳಿಸಿದರು.

ಜಿಲ್ಲಾಡಳಿತ ಭವನದಿಂದ ಪಚ್ಚಪ್ಪ ವೃತ್ತಕ್ಕೆ ಸೈಕಲ್ ಸವಾರಿ ಮೂಲಕ ಸಾಮಾನ್ಯರಂತೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್, ಶಾಸಕರಾದ ಮಹೇಶ್ ಹಾಗೂ ಪುಟ್ಟರಂಗಶೆಟ್ಟಿ. ಡಿಸಿ , ಜಿಪಂ ಸಿಇಒ, ಎಸ್​ಪಿ, ನರ್ಸ್​ಗಳು, ಪೊಲೀಸರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರು, ಅಗ್ನಿಶಾಮಕ ದಳ ಮತ್ತು ಪೌರ ಕಾರ್ಮಿಕರಿಗೆ ಸಿಬ್ಬಂದಿಗೆ ಪುಷ್ಪ ಮಳೆ ಸುರಿಸಿ ಅಭಿಮಾನ ಮೆರೆದರು.

ಚಾಮರಾಜನಗರಕ್ಕೆ ಕೊರೊನಾ ಮುಕ್ತ ನಗರ ಎಂಬ ಗರಿ

ಜಿಲ್ಲೆಯ ಕೊರೊನಾ ಯೋಧರು ಸಾಮಾನ್ಯರಾಗಿ ಅಸಾಮಾನ್ಯ ಕೆಲಸ ಮಾಡಿದ್ದಾರೆ, ರಾಜ್ಯದಲ್ಲಿ, ದೇಶದಲ್ಲಿ ಚಾಮರಾಜನಗರಕ್ಕೆ ಉತ್ತಮ ಹೆಸರು ತಂದಿದ್ದಾರೆ, ನಮ್ಮನ್ನು ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ ಅವರಿಗಾಗಿ ನಮ್ಮ ಅಭಿಮಾನದ ಹೂಮಳೆ ಎಂದು ಸಚಿವರು ಶ್ಲಾಘಿಸಿದರು.

ABOUT THE AUTHOR

...view details