ಕರ್ನಾಟಕ

karnataka

ETV Bharat / state

ವೀರಪ್ಪನ್ ದಾಳಿಗೆ ಬಲಿಯಾದ ರಾಮಾಪುರ ಪೊಲೀಸರಿಗೆ ಸ್ಮಾರಕ ನಿರ್ಮಾಣ: ಸಚಿವ ಸುರೇಶ್ ಕುಮಾರ್ - ರಾಮಾಪುರ ಪೊಲೀಸ್ ಠಾಣೆಗೆ ಸುರೇಶ ಕುಮಾರ್ ಭೇಟಿ

ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯದ ಬಳಿಕ ಇಂದು ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

minister suresh kumar
ರಾಮಾಪುರ ಪೊಲೀಸ್ ಠಾಣೆಗೆ ಸುರೇಶ ಕುಮಾರ್ ಭೇಟಿ

By

Published : Feb 11, 2020, 9:02 PM IST

ಚಾಮರಾಜನಗರ:ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯದ ಬಳಿಕ ಇಂದು ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ರಾಮಾಪುರ ಪೊಲೀಸ್ ಠಾಣೆಗೆ ಸುರೇಶ ಕುಮಾರ್ ಭೇಟಿ
1992 ರ ಮೇ 21 ರ ಮಧ್ಯರಾತ್ರಿ ಕಾಡುಗಳ್ಳ ವೀರಪ್ಪನ್ ಮತ್ತು ಸಹಚರರು ರಾಮಾಪುರ ಠಾಣೆಗೆ ದಾಳಿ ಮಾಡಿ ಐವರು ಪೊಲೀಸರನ್ನು ಬಲಿ ಪಡೆದು ಅಟ್ಟಹಾಸ ಮೆರೆದಿದ್ದರು. ಇಂದಿಗೂ ಆತನ ದಾಳಿಯ ಕುರುಹುಗಳು, ಬುಲೆಟ್‌ಗಳು ಬಿದ್ದ ಗುರುತುಗಳನ್ನು ಸಚಿವರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳಾದ ಇಳಂಗೋವನ್, ಗೋವಿಂದರಾಜು, ಸಿದ್ಧರಾಜು, ರಾಚಪ್ಪ, ಪ್ರೇಮ್ ಕುಮಾರ್‌ರಿಗೆ ಗೌರವ ಸಮರ್ಪಿಸಿದರು.

ಗೋಪಿನಾಥಂನಲ್ಲಿರುವ ಅರಣ್ಯಾಧಿಕಾರಿ ಶ್ರೀನಿವಾಸನ್ ಅವರ ಸ್ಮಾರಕದ ರೀತಿ ರಾಮಾಪುರ ಠಾಣೆಯಲ್ಲಿ ವೀರಪ್ಪನ್ ದಾಳಿಗೆ ಬಲಿಯಾದ ಪೊಲೀಸರಿಗೆ ಸ್ಮಾರಕ ನಿರ್ಮಿಸಲಾಗುವುದು. ಈ ಮೂಲಕ ಆತನ ಕ್ರೌರ್ಯಕ್ಕೆ ಹೆದರದೇ ಹೋರಾಡಿ ಪ್ರಾಣ ತೆತ್ತ ಪೊಲೀಸರ ಬಲಿದಾನವನ್ನು ನೆನಪಿಸಿಕೊಳ್ಳುವ ಕೆಲಸವಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಮಾಪುರ ಪೊಲೀಸ್ ಠಾಣೆ ಬಳಿಕ ಸಚಿವರು ರಾಮಾಪುರದ ಶತಮಾನದ ಸರ್ಕಾರಿ ಶಾಲೆಗೂ ಭೇಟಿ ನೀಡಿದರು.

ABOUT THE AUTHOR

...view details