ಚಾಮರಾಜನಗರ: ಕೇರಳ, ತಮಿಳುನಾಡಿನಿಂದ ಬರುವವರು ಏನಾದರೂ ನಕಲಿ ಕೋವಿಡ್ ರಿಪೋರ್ಟ್ ತಂದರೆ ಅವರನ್ನು ಜೈಲಿಗೆ ಕಳುಹಿಸಿ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ಗೆ ಸಚಿವರು ಭೇಟಿ ನೀಡಿದರು. ಕರ್ನಾಟಕ ಮತ್ತು ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ನಕಲಿ ಆರ್ಟಿ - ಪಿಸಿಆರ್ ವರದಿ ಬರುತ್ತಿರುವ ಬಗ್ಗೆ ಸಚಿವರು ಮಾಹಿತಿ ಪಡೆದರು.
ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ:
ರಾಜ್ಯಕ್ಕೆ ಬರುವವರು ನಕಲಿ ರಿಪೋರ್ಟ್ ತಂದರೆ ವಾಹನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕು. ಈ ಕುರಿತಂತೆ ಕೇರಳದ ವೈನಾಡು ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ವರದಿ ರಹಿತ ಅವಕಾಶ ನೀಡಬೇಕು. ಉಳಿದಂತೆ ಯಾವುದೇ ಕಾರಣಕ್ಕೂ ವರದಿ ಇಲ್ಲದೇ ಪ್ರವೇಶ ನೀಡಬೇಡಿ ಎಂದು ಜಿಲ್ಲಾಧಿಕಾರಿ ರವಿ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಗಡಿಭಾಗದಲ್ಲಿ ನಿತ್ಯ ಎಷ್ಟು ವಾಹನಗಳು ಬರುತ್ತವೆ. ಎಷ್ಟು ವಾಹನಗಳು ವಾಪಸ್ ಹೋದವು ಎಂಬ ಮಾಹಿತಿನ ಮೂದಿಸಬೇಕು. ಕೊವೀಡ್ ಮೂರನೇ ಅಲೆಗೆ ಕಡಿವಾಣ ಹಾಕಲು ಅಧಿಕಾರಿಗಳು ಶ್ರಮ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ಕೋವಿಡ್ ರೂಲ್ಸ್ ಬ್ರೇಕ್:
ಚಾಮರಾಜನಗರ ಜಿಲ್ಲಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲಿದ್ದು, ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಈ ನಿಯಮ ಸಚಿವರು ಮತ್ತು ಅವರ ಬೆಂಬಲಿಗರಿಗೆ ಮಾತ್ರ ಅನ್ವಯವಾಗಲಿಲ್ಲ. ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಚಿವರು ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಷ್ಟೇ ಅಲ್ಲದೆ ಬೆಂಬಲಿಗರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಜಿಲ್ಲಾಡಳಿತದ ಆದೇಶವನ್ನು ಗಾಳಿಗೆ ತೂರಿದ ಘಟನೆ ನಡೆಯಿತು.
ಓದಿ: ವಿಚಾರಣೆಗೆ ED ಬುಲಾವ್: ದೆಹಲಿಗೆ ತೆರಳಿದ ಜಮೀರ್ ಅಹ್ಮದ್ ಖಾನ್