ಕರ್ನಾಟಕ

karnataka

ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ‌ ಬೇಲಿಗೆ ಹಾರುವ ಭಕ್ತರು.. ಇದೇ ಇಲ್ಲಿನ ಸಂಪ್ರದಾಯ

ಮೊದಲಿಗೆ ಗ್ರಾಮ ದೇವತೆಗಳ‌ ಪ್ರತಿನಿಧಿಗಳು ಎನಿಸಿಕೊಂಡವರು ಸುತ್ತಿಗೆ, ಸುರಾಪಾನಿ‌ ಹಿಡಿದು ದೇವಾಲಯ ಪ್ರದಕ್ಷಿಣೆ ಹಾಕುವಾಗ ದೇವರು ಮೈಮೇಲೆ ಬಂದಂತಾಗಿ ಓಡಿ‌ ಬಂದು ಮುಳ್ಳಿನ‌ ಬೇಲಿಗೆ ಹಾರುತ್ತಾರೆ. ಅದೇ ರೀತಿ ಕೆಲ ಭಕ್ತರೂ ದೇವರನ್ನು ಸಂತುಷ್ಟಗೊಳಿಸಲು‌ ಮುಳ್ಳಿನ ಬೇಲಿಗೆ ಹಾರಿದರು.‌ ಅಲ್ಲೇ ಇದ್ದ ಯುವಕರು ಅವರನ್ನು ಮೇಲಕ್ಕೆತ್ತಿದ್ದರು..

By

Published : Mar 29, 2021, 9:50 PM IST

Published : Mar 29, 2021, 9:50 PM IST

Maramma fair at Gulipura village
ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ‌ ಬೇಲಿಗೆ ಹಾರುವ ಭಕ್ತರು

ಚಾಮರಾಜನಗರ :ಗ್ರಾಮದೇವತೆ ಹಬ್ಬ ಬಂತೆಂದರೆ ಭರ್ಜರಿ ಊಟ, ನೃತ್ಯ, ದೇವರ ಪೂಜೆ,‌ ಬಾಯಿಗೆ ಬೀಗ ಇರುವುದು ಸಾಮಾನ್ಯ.‌ ಆದರೆ, ಇಲ್ಲಿ ಹತ್ತಾರು ಭಕ್ತರು ಮುಳ್ಳಿನ‌ ಬೇಲಿಗೆ ಹಾರಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ‌ ಬೇಲಿಗೆ ಹಾರುವ ಭಕ್ತರು..

ಯಳಂದೂರು ತಾಲೂಕಿನ‌ ಗೂಳಿಪುರ ಗ್ರಾಮದಲ್ಲಿ ಮಾರಮ್ಮನ‌ ಹಬ್ಬದ ಪ್ರಯುಕ್ತ ಉರುಕಾತಮ್ಮ, ಕುಂಟು ಮಾರಮ್ಮ, ಮಂಟೇಸ್ವಾಮಿ ಸೇರಿ ನಾನಾ ದೇವರನ್ನು ಪೂಜಿಸುವ ಭಕ್ತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ ಪುನಸ್ಕಾರ, ಮಡೆ,‌ ನೈವೇದ್ಯ ಅರ್ಪಿಸಿ ಸಂಜೆ ವೇಳೆಗೆ ದೇವಾಲಯದ ಮುಂಭಾಗ ಇರುವ ಜಮೀನಿನ ಮುಳ್ಳಿನ ಬೇಲಿಗೆ ಹಾರಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಮೊದಲಿಗೆ ಗ್ರಾಮ ದೇವತೆಗಳ‌ ಪ್ರತಿನಿಧಿಗಳು ಎನಿಸಿಕೊಂಡವರು ಸುತ್ತಿಗೆ, ಸುರಾಪಾನಿ‌ ಹಿಡಿದು ದೇವಾಲಯ ಪ್ರದಕ್ಷಿಣೆ ಹಾಕುವಾಗ ದೇವರು ಮೈಮೇಲೆ ಬಂದಂತಾಗಿ ಓಡಿ‌ ಬಂದು ಮುಳ್ಳಿನ‌ ಬೇಲಿಗೆ ಹಾರುತ್ತಾರೆ. ಅದೇ ರೀತಿ ಕೆಲ ಭಕ್ತರೂ ದೇವರನ್ನು ಸಂತುಷ್ಟಗೊಳಿಸಲು‌ ಮುಳ್ಳಿನ ಬೇಲಿಗೆ ಹಾರಿದರು.‌ ಅಲ್ಲೇ ಇದ್ದ ಯುವಕರು ಅವರನ್ನು ಮೇಲಕ್ಕೆತ್ತಿದ್ದರು.

ರಭಸದಿಂದ ಓಡಿ‌ ಬರುವ ಭಕ್ತರು ಮುಳ್ಳಿನ‌ ಬೇಲಿಗೆ ಹಾರಿದರೂ ರಕ್ತ ಬರುವುದಾಗಲಿ, ನೋವಾಗುವುದಾಗಲಿ ಆಗದಿರುವುದು ಸೇರಿದ್ದ ನೂರಾರು ಮಂದಿಯನ್ನು ಅಚ್ಚರಿಗೆ ನೂಕಿತು.

ABOUT THE AUTHOR

...view details