ಕರ್ನಾಟಕ

karnataka

ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ: ಸೋಂಕಿತರಿಗೆ ಓದುವ ಗೀಳು ಹಚ್ಚಿದ ಜಿಲ್ಲಾಡಳಿತ!

ಮಾನಸಿಕ ಒತ್ತಡ, ಕೊರೊನಾ ಬಂದಿತೆಂಬ ಹೆದರಿಕೆ, ಮೊಬೈಲ್ ಎಂಬ ಗೀಳು ಬಿಟ್ಟು ಓದುವ ಹವ್ಯಾಸ ಹೆಚ್ಚಿಸಲು, ಆಸ್ಪತ್ರೆಯಲ್ಲಿದ್ದಷ್ಟು ದಿನ ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು ಚಾಮರಾಜನಗರ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಗ್ರಂಥಾಲಯ ಸ್ಥಾಪಿಸಿ ಗಮನ ಸೆಳೆದಿದೆ.

By

Published : Oct 20, 2020, 12:43 PM IST

Published : Oct 20, 2020, 12:43 PM IST

ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ
ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ

ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್​ನಲ್ಲಿ ಚಾಮರಾಜನಗರ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಗ್ರಂಥಾಲಯ ಸ್ಥಾಪಿಸಿ ಗಮನ ಸೆಳೆದಿದೆ.

ಕೊರೊನಾ ರೋಗ ಲಕ್ಷಣಗಳಿರುವ ಕೋವಿಡ್ ಸೋಂಕಿತರಿಗೆ ಆರೈಕೆ ಮಾಡುವ ಉದ್ದೇಶದಿಂದ ಸಂತೇಮರಹಳ್ಳಿಯ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಆರಂಭಿಸಿರುವ 60 ಹಾಸಿಗೆಗಳ ಕೋವಿಡ್ ಆಸ್ಪತ್ರೆಯಲ್ಲಿ 700ಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವೊಂದನ್ನು ಸ್ಥಾಪಿಸಲಾಗಿದೆ. ಮಾನಸಿಕ ಒತ್ತಡ, ಕೊರೊನಾ ಬಂದಿತೆಂಬ ಹೆದರಿಕೆ, ಮೊಬೈಲ್ ಎಂಬ ಗೀಳು ಬಿಟ್ಟು ಓದುವ ಹವ್ಯಾಸ ಹೆಚ್ಚಿಸಲು, ಆಸ್ಪತ್ರೆಯಲ್ಲಿದ್ದಷ್ಟು ದಿನ ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ

ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಓದುವ ಹವ್ಯಾಸ ಇರುವವರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಸ್ಥಾಪಿಸಲು ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆ ಗ್ರಂಥಾಲಯ ಸ್ಥಾಪಿಸಿ 700ಕ್ಕೂ ಅಧಿಕ ಪುಸ್ತಕಗಳನ್ನು ಇಡಲಾಗಿದೆ. 5-6 ದಿನಪತ್ರಿಕೆಗಳನ್ನು ಆಸ್ಪತ್ರೆಗೆ ಹಾಕಿಸಿಕೊಳ್ಳುತ್ತಿದ್ದು, 10 ಮಂದಿ ಕೂರುವಂತೆ ಕುರ್ಚಿ-ಟೇಬಲ್​ಗಳನ್ನು ಜೋಡಿಸಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು, ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಪಿ‌.ಲಂಕೆಶ್ ಅವರ ಪುಸ್ತಕಗಳು, ಮಹಾತ್ಮ ಗಾಂಧಿ, ಡಾ. ಬಿ‌.ಆರ್.ಅಂಬೇಡ್ಕರ್ ಸೇರಿದಂತೆ ಹೋರಾಟಗಾರರ ಬದುಕು-ಬರಹಗಳು, ಜಲಸಂರಕ್ಷಣೆ, ಔಷಧೀಯ ಸಸ್ಯಗಳು, ಯೋಗ, ರಂಗಭೂಮಿ, ಮಕ್ಕಳ ಸಾಹಿತ್ಯ, ಚಿಣ್ಣರು ಬಣ್ಣ ಹಚ್ಚಬಹುದಾದ ಪುಸ್ತಕಗಳು, ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಬರೆದ ಕೃತಿಗಳೂ ಇವೆ.

For All Latest Updates

TAGGED:

ABOUT THE AUTHOR

...view details