ಕರ್ನಾಟಕ

karnataka

ETV Bharat / state

ಚಿರತೆಯಿಂದ ಮತ್ತೋರ್ವನ ಮೇಲೆ ದಾಳಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಚಾಮರಾಜನಗರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಚಿರತೆ ದಾಳಿ ಮಾಡಿ ಗಾಯಗೊಳಿಸಿದ್ದು ಜನರನ್ನು ಆತಂಕಗೊಳಿಸಿದೆ.

leopard-attack-an-man-in-chamrajnagar
ಚಿರತೆ ದಾಳಿ

By

Published : Apr 5, 2020, 3:53 PM IST

ಚಾಮರಾಜನಗರ: ಕಳೆದೆರಡು ದಿನದ ಹಿಂದೆ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಈಗ ಮತ್ತೋರ್ವನ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದೆ. ಈ ಘಟನೆ ಚಾಮರಾಜನಗರ ತಾಲೂಕಿನ ನಂಜದೇವನಪುರದಲ್ಲಿ ನಡೆದಿದೆ.
ಕಲ್ಪುರ ಗ್ರಾಮದ ರಾಜಪ್ಪ ಚಿರತೆ ದಾಳಿಗೊಳಗಾಗಿ ಗಾಯಗೊಂಡಿರುವ ರೈತ. ನಂಜೇದೇವನಪುರ-ಹಳೇಪುರ ಗುಡ್ಡದ ಬಳಿ ಹಾಡಹಗಲೇ ಚಿರತೆ ದಾಳಿ ನಡೆಸಿದೆ. ಗಾಯಗೊಂಡ ವ್ಯಕ್ತಿ ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟಾದರೂ ಚಿರತೆ ಸೆರೆಗೆ ಮುಂದಾಗದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಚಿರತೆ ಸೆರೆ ಹಿಡಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details