ಕರ್ನಾಟಕ

karnataka

ಕಾರ್ಮಿಕರ ಜೊತೆ ಸೇರಿ ಕೆರೆ ಹೂಳೆತ್ತಿದ ಶಾಸಕ ಎನ್.ಮಹೇಶ್..

ಲಾಕ್​ಡೌನ್ ಸಂಕಷ್ಟದಲ್ಲಿದ್ದ ಜನರನ್ನು ನರೇಗಾ ಯೋಜನೆ ಕೈಹಿಡಿದಿದೆ. ಕೊಳ್ಳೇಗಾಲ, ಯಳಂದೂರು ತಾಲೂಕುಗಳು ಸೇರಿ ಸಂತೇ ಮರಳ್ಳಿಯ ಸುಮಾರು 6 ಸಾವಿರ ಜನರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ದೊರಕಿದಂತಾಗಿದೆ.

By

Published : May 10, 2020, 11:28 AM IST

Published : May 10, 2020, 11:28 AM IST

Lawyer N. Mahesh
ಕೆರೆ ಹೂಳೆತ್ತಿದ ಶಾಸಕ ಎನ್.ಮಹೇಶ್

ಕೊಳ್ಳೇಗಾಲ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿನ ಕುಂತೂರು ಹಾಗೂ ಟಗರಪುರ ಕೆರೆ‌ ಹೂಳೆತ್ತುವ ಕೆಲಸದಲ್ಲಿ ಶಾಸಕ‌ ಎನ್ ಮಹೇಶ್ ಕೈ ಜೊಡಿಸಿದ್ದಾರೆ. ಕೆರೆಗೆ ಇಳಿದು ಸ್ವತಃ ಮಣ್ಣನ್ನು ಅಗೆಯುವ ಮೂಲಕ ಕಾರ್ಮಿಕರಿಗೆ ಸಾಥ್‌ ನೀಡಿದರು.

ಮಹಾಮಾರಿ‌ ಕೊರೊನಾ ದೇಶಕ್ಕೆ ವಕ್ಕರಿಸಿದ್ದರಿಂದ ಕೂಲಿ ಕಾರ್ಮಿಕರಿಗೆ ಭಾರಿ ಹೊಡೆತ ಬಿದ್ದಿದೆ. ಇದೀಗ ನರೇಗಾ ಉದ್ಯೋಗ ನೀಡಿರುವುದು ಜನತೆಯಲ್ಲಿ ಜೀವ ಕಳೆ ತಂದಿದೆ. ಈ ಬಗ್ಗೆ ಕೆರೆ ಅಭಿವೃದ್ದಿ ಕೆಲಸದಲ್ಲಿ ಭಾಗಿಯಾಗಿ ಮಾತನಾಡಿಶಾಸಕ ಎನ್.ಮಹೇಶ್ ಅವರು, ಕುಟುಂಬವೊಂದರಲ್ಲಿ ಒಬ್ಬರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಿದ್ದೆಯಾದ್ರೆ ಆ ಕುಟುಂಬದ ಆರ್ಥಿಕತೆ ಸದೃಢವಾಗುತ್ತದೆ ಎಂದರು.

ಕೆರೆ‌ ಹೂಳೆತ್ತುವ ಕೆಲಸದಲ್ಲಿ ಕಾರ್ಮಿಕರಿಗೆ ಸಾಥ್​ ನೀಡಿದ ಶಾಸಕ ಎನ್ ಮಹೇಶ್..

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 6 ಸಾವಿರ ಜನಕ್ಕೆ ಉದ್ಯೋಗ ಸಿಕ್ಕಿದೆ. ಲಾಕ್​ಡೌನ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ದೊರಕಿದಂತಾಗಿದೆ ಎಂದರು.

ABOUT THE AUTHOR

...view details