ಕರ್ನಾಟಕ

karnataka

ETV Bharat / state

ಟಿಎಪಿಸಿಎಂಎಸ್​ನಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಕ್ರಮಕ್ಕೆ ಶಾಸಕ ಎನ್.ಮಹೇಶ್ ಆಗ್ರಹ

2018ರಲ್ಲಿ ಕೊಳ್ಳೇಗಾಲ ಟಿಎಪಿಸಿಎಂಎಸ್ ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಬಡವರಿಗೆ ಸೇರಬೇಕಾದ ಅಕ್ಕಿ, ಬೆಳೆ, ಸಕ್ಕರೆ ಕ್ವಿಂಟಾಲ್ ಗಟ್ಟಲೆ ನಾಪತ್ತೆಯಾಗಿರುವುದು ತಿಳಿದು‌ ಬಂದಿದೆ ಎಂದು ಶಾಸಕ ಎನ್.ಮಹೇಶ್ ಆರೋಪಿಸಿದ್ದಾರೆ.

By

Published : Jul 4, 2020, 11:46 AM IST

MLA N.Mahesh
ಶಾಸಕ ಎನ್.ಮಹೇಶ್

ಕೊಳ್ಳೇಗಾಲ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್)ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಶಾಸಕ ಎನ್.ಮಹೇಶ್ ಆರೋಪಿಸಿದ್ದಾರೆ. ತಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಶಾಸಕ ಎನ್.ಮಹೇಶ್
ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರಿಗೆ ತಲುಪಬೇಕಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆಯನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ‌ವಾಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು.

ಟಿಎಪಿಸಿಎಂಎಸ್​ನ 17 ಸಿಬ್ಬಂದಿ ನನ್ನ ಬಳಿ ಬಂದು ನಮಗೆ ಕಳೆದ 7 ತಿಂಗಳುಗಳಿಂದ ಸಂಬಳ ನೀಡಿಲ್ಲ ಎಂದು ದೂರು ನೀಡಿದ್ದರು. ಈ‌ ಹಿನ್ನೆಲೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಇಲ್ಲಿನ ವಿಸ್ತರಣಾ ಪುಸ್ತಕ ಪರಿಶೀಲನೆ ನಡೆಸುವಾಗ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ‌ಬಂದಿದೆ ಎಂದು ತಿಳಿಸಿದರು.
ಏನಿದು ಅವ್ಯವಹಾರ?:ಈ ಹಿಂದೆ 2018 ರಲ್ಲಿ ಕೊಳ್ಳೇಗಾಲ ಟಿಎಪಿಸಿಎಂಎಸ್ ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಬಡವರಿಗೆ ಸೇರಬೇಕಾದ ಅಕ್ಕಿ, ಬೇಳೆ, ಸಕ್ಕರೆ ಕ್ವಿಂಟಾಲ್ ಗಟ್ಟಲೆ ನಾಪತ್ತೆಯಾಗಿರುವುದು ತಿಳಿದು‌ ಬಂದಿದೆ. ಈ ಬಗ್ಗೆ, 18 ತಿಂಗಳುಗಳಿಂದಲ್ಲೂ ಸಂಬಂಧಪಟ್ಟ ಅಧಿಕಾರಿಗಳು ಪರೀಶಿಲನೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಸಹ ಯಾವುದೇ ಸರಿಯಾದ ಮಾಹಿತಿ ದೊರಕಿಲ್ಲ ಎಂದರು.
ಕ್ವಿಂಟಾಲ್ ಗಟ್ಟಲೆ ಪಡಿತರ ನಾಪತ್ತೆ:2,268 ಕ್ವಿಂಟಾಲ್ ಅಕ್ಕಿ, 234 ಕ್ವಿಂಟಾಲ್ ತೊಗರಿ ಬೆಳೆ, 530 ಕ್ವಿಂಟಾಲ್, ಸಕ್ಕರೆ, 15,813 ಲೀಟರ್ ತಾಳೆ ಎಣ್ಣೆ ನಾಪತ್ತೆಯಾಗಿದ್ದು, ಅಂದಾಜು 1.18 ಕೋಟಿ ರೂ. ಮೊತ್ತದ ದೊಡ್ಡ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕರು ಒತ್ತಾಯಿಸಿದರು.
ಶೀಘ್ರ ತನಿಖೆಗೆ ಸೂಚನೆ:ಈ ಪ್ರಕರಣದ ಸಂಬಂಧ ತ್ವರಿತವಾಗಿ ತನಿಖೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಉಪ‌ ನಿರ್ದೇಶಕ ವಿಕ್ರಮ್ ರಾಜೇ ಅರಸ್, ಹಾಗೂ ಸಹಾಯಕ ನಿರ್ದೇಶಕ ರಮೇಶ್ ಅವರಿಗೆ ಸೂಚನೆ ನೀಡಿದ್ದೇನೆ‌. ಇನ್ನೂ 15 ದಿನದೊಳಗೆ ತನಿಖೆ‌ ಮುಕ್ತಾಯವಾಗಬಹುದು. ಈ‌ ಬಗ್ಗೆ ಅಧಿಕಾರಿಗಳಿಗೆ‌ ಕೆಲವು ಸೂಚನೆಗಳನ್ನು ನೀಡಿದ್ದೇನೆ. ತಪಿತಸ್ಥರ ‌ವಿರುದ್ಧ ಕಾನೂನು ಕ್ರಮವಾಗಲಿ. ಇನ್ನು ಹನೂರಿನಲ್ಲಿರುವ ಟಿಎಪಿಸಿಎಂಎಸ್ ಸಮಿತಿಗೆ ಸಂಬಂಧಿಸಿದ ಪೆಟ್ರೋಲ್ ಬಂಕ್​ನಲ್ಲೂ. ಲಕ್ಷಾಂತರ ರೂ ಅವ್ಯವಹಾರ ನಡೆದಿರುವುದು ತಿಳಿದು‌ ಬಂದಿದೆ. ಇದರ ಹಿಂದೆ ಅನೇಕ ಪ್ರಮುಖ ವ್ಯಕ್ತಿಗಳ ಕೈವಾಡವಿದ್ದು ಯಾರೇ ಆದರೂ ಸಹ ಕಾನೂನು ರೀತಿ ಶಿಕ್ಷೆ ಅನುಭವಿಸಬೇಕು. ಈ ತನಿಖೆಯನ್ನು ತ್ವರಿತವಾಗಿ ಮುಗಿಸಬೇಕು ಸೂಚಿಸಿದ್ದೇನೆ ಎಂದರು.

ABOUT THE AUTHOR

...view details