ಕರ್ನಾಟಕ

karnataka

ETV Bharat / state

ನಕಲಿ ಶೂ ವಿತರಣೆ ಬಗ್ಗೆ ತನಿಖೆ, ಶಾಲೆಗಳ ದುರಸ್ತಿ ಎಸ್​ಡಿಎಂಸಿಗಳ ಹೆಗಲಿಗೆ: ಸಚಿವ ಸುರೇಶ್​​ ಕುಮಾರ್​ - ಟಿಪ್ಪು ವಿಚಾರ

ಶಾಲಾ ಮಕ್ಕಳಿಗೆ ಶೂ ನೀಡುವ ಯೋಜನೆಯಲ್ಲಿ ಗೋಲ್​​ಮಾಲ್ ಆಗಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್ ತಿಳಿಸಿದರು.

ನಕಲಿ ಶೂ ವಿತರಣೆ ತನಿಖೆ; ಶಾಲೆಗಳ ದುರಸ್ತಿ ಎಸ್ಡಿಎಂಸಿ ಹೆಗಲಿಗೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

By

Published : Nov 4, 2019, 12:24 PM IST

ಚಾಮರಾಜನಗರ:ಶಾಲಾ ಮಕ್ಕಳಿಗೆ ಶೂ ನೀಡುವ ಯೋಜನೆಯಲ್ಲಿ ಗೋಲ್​​ಮಾಲ್ ಆಗಿರುವ ಕುರಿತು ತನಿಖೆ ನಡೆಸಿ ಮೂಲ ಪುರುಷನನ್ನು ಪತ್ತೆ ಹಚ್ಚಲಾಗುವುದು ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು.

ನಕಲಿ ಶೂ ವಿತರಣೆ ತನಿಖೆ, ಶಾಲೆಗಳ ದುರಸ್ತಿ ಎಸ್​​ಡಿಎಂಸಿ ಹೆಗಲಿಗೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಕ್ಕಳಿಗೆ ನೀಡುವ ಶೂಗಳು 1 ತಿಂಗಳು ಬಾಳಿಕೆ ಬರುತ್ತವೆ ಎಂದು ಡೀಲರ್​ಗಳೇ ಹೇಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು. ಶೂ ವಿತರಣೆಯನ್ನು ಸರ್ಕಾರಿ ಸ್ವಾಮ್ಯದ ಲಿಡ್​ಕರ್ ಸಂಸ್ಥೆಗೆ ವಹಿಸುವ ಚಿಂತನೆಯಿದೆ ಎಂದು ಹೇಳಿದರು. ಜೊತೆಗೆ, ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಎಸ್​ಡಿಎಂಸಿಗೆ ನೀಡುತ್ತಿದ್ದು, ಅವರ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಬಾರದು ಎಂದು ಮನವಿ ಮಾಡಿದರು.

ಪಿಯುಸಿ ಫಲಿತಾಂಶಕ್ಕೂ ಮುನ್ನ ನೀಟ್ ಫಲಿತಾಂಶ ಬಂದಾಗ ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆಯಾಗಲಿದೆ ಎಂಬ ಸಲಹೆ ಕೇಳಿ ಬಂದಿದ್ದು, ಗುರುವಾರ ಪಿಯು ನಿರ್ದೇಶಕರು ಮತ್ತು ಹಿಂದಿನ ನಿರ್ದೇಶಕರ ಸಭೆ ಕರೆಯಲಾಗಿದೆ. ಅಂದು ಇದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದು ಹಾಕಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪಠ್ಯದಿಂದ ತೆಗೆದುಹಾಕಬೇಕೆಂದು ಪತ್ರ ಬರೆದಿರುವ ಅಪ್ಪಚ್ಚು ರಂಜನ್ ಅವರಿಂದ ಯಾವ ಕಾರಣಗಳಿಗೆ ಟಿಪ್ಪು ಪಠ್ಯ ಬೇಡ ಎಂದು ವಿವರ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು. ಇನ್ನುಬಿಎಸ್​ವೈ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ABOUT THE AUTHOR

...view details