ಚಾಮರಾಜನಗರ:ತೀರ್ಥಯಾತ್ರೆಗೆ ತೆರಳಿದ ಜಿಲ್ಲೆಯ ಯುವಕನೋರ್ವ ನೀರುಪಾಲಾಗಿರುವ ಘಟನೆ ಕಳಸ ಸಮೀಪದ ಭದ್ರಾ ನದಿಯಲ್ಲಿ ನಡೆದಿದೆ.
ಭದ್ರಾ ನದಿಯಲ್ಲಿ ಗುಂಡ್ಲುಪೇಟೆ ಯಾತ್ರಾರ್ಥಿ ಸಾವು - ಗುಂಡ್ಲುಪೇಟೆ ಯಾತ್ರಾರ್ಥಿ ಸಾವು
ತೀರ್ಥಯಾತ್ರೆಗೆ ತೆರಳಿದ ಗುಂಡ್ಲುಪೇಟೆ ಯುವಕನೋರ್ವ ನೀರುಪಾಲಾಗಿರುವ ಘಟನೆ ಕಳಸ ಸಮೀಪದ ಭದ್ರಾ ನದಿಯಲ್ಲಿ ನಡೆದಿದೆ.
ಮೃತ ಶಿವಪ್ರಸಾದ್
ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದ ಶಿವಪ್ರಸಾದ್(35) ಮೃತ. 27 ಜನರ ತಂಡ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಿನಿ ಬಸ್ ನಲ್ಲಿ ತೆರಳಿ ವಾಪಾಸ್ ಬರುವಾಗ ಕಳಸದ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಈ ಅವಘಡ ನಡೆದಿದೆ ಎನ್ನಲಾಗಿದೆ.
ನದಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.