ಕರ್ನಾಟಕ

karnataka

ETV Bharat / state

ಇನ್ಮೇಲೆ ದೇವರಿಗೂ ಫೋನ್ ಪೇ ಗೂಗಲ್ ಪೇ ಮಾಡಿ... ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ ಹುಂಡಿ ಸೇವೆ ಆರಂಭ

ನಾಡಿನ ಪ್ರಮುಖ ಪ್ರೇಕ್ಷಣೀಯ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆ ಆರಂಭವಾಗಿದೆ

By

Published : Aug 27, 2022, 1:24 PM IST

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ ಹುಂಡಿ ಸೇವೆ ಆರಂಭ
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ ಹುಂಡಿ ಸೇವೆ ಆರಂಭ

ಚಾಮರಾಜನಗರ:ಸದಾ ಹಿಮಚ್ಛಾದಿತವಾಗಿರುವ, ನಾಡಿನ ಪ್ರಮುಖ ಪ್ರೇಕ್ಷಣೀಯ ಸ್ಥಳದಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ ಹುಂಡಿ ಸೇವೆ ಆರಂಭವಾಗಿದೆ. ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇ ಹುಂಡಿ ಸೇವೆಗೆ ತಹಶೀಲ್ದಾರ್ ಸಿ.ಜಿ.ರವಿಶಂಕರ್ ಇಂದು ಚಾಲನೆ ಕೊಟ್ಟರು.

ಬಳಿಕ ಮಾತನಾಡಿ ಅವರು, ದೇಶವೇ ಡಿಜಿಟಲೀಕರಣವಾಗುತ್ತಿರುವ ಸಂದರ್ಭದಲ್ಲಿ ಭಕ್ತರು ಕಾಣಿಕೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆಯನ್ನು ಎಸ್ ಬಿಐ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು.

ಭಕ್ತರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಹಣ ಸಲ್ಲಿಸಬಹುದಾಗಿದೆ. ಭಕ್ತರು ತಾವು ಕುಳಿತ ಸ್ಥಳದಲ್ಲೇ ದೇವಸ್ಥಾನಕ್ಕೆ ಹಣ ಜಮಾ ಮಾಡಲು ನೆರವಾಗುವ ಉದ್ದೇಶದಿಂದ ಇ-ಹುಂಡಿ ಆರಂಭ ಮಾಡಲಾಗಿದ್ದು, ಇನ್ನು ಮುಂದೆ ಜನರು ದೇವಸ್ಥಾನದ ಗೋಲಕಕ್ಕೆ ಹಣ ನೀಡುವ ಬದಲು ಇ-ಹುಂಡಿಗೆ ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್, ಪೇಟಿಎಂ ಮೂಲಕ ಹಣ ಹಾಕಬಹುದು ಎಂದು ತಿಳಿಸಿದರು.

No Network - ವಾರಾಂತ್ಯ ಬಂತೆಂದರೆ ರಾಜ್ಯ - ಅಂತರರಾಜ್ಯಗಳಿಂದ ಜನರು‌ ಕಿಕ್ಕಿರಿದು ಪ್ರಕೃತಿ ಸೌಂದರ್ಯ ಸವಿಯಲಿದ್ದು, ಸಾವಿರಾರು ಕೃಷ್ಣ ಭಕ್ತರು ದೇವರ ದರ್ಶನಕ್ಕೆ ಲಗ್ಗೆ ಇಡುತ್ತಾರೆ‌.‌ ಆದರೆ, ಗೋಪಾಲಸ್ವಾಮಿ ಬೆಟ್ಟ ಏರುತ್ತಿದ್ದಂತೆ ಎಲ್ಲಾ ಮೊಬೈಲ್ ನೆಟ್ವರ್ಕ್ ಕೈಕೊಡುತ್ತದೆ. ಹೀಗಾಗಿ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತರು ಇ-ಹುಂಡಿ ಬಳಸುವುದು ಕಷ್ಟವಾಗಲಿದೆ. ಆದರೆ, ಫೋಟೋ ಸೆರೆಹಿಡಿದು ತಪ್ಪಲಿನಲ್ಲಿ ಇಲ್ಲವೇ ತಾವು ಇಷ್ಟ ಪಟ್ಟ ದಿನಗಳಲ್ಲಿ ಮನೆಯಲ್ಲೇ ಕುಳಿತು ಗೋಲಕಕ್ಕೆ ಹಣ ಹಾಕಬಹುದಾಗಿದೆ.

(ಇದನ್ನೂ ಓದಿ: ತುಮಕೂರಿನ ದೇವಸ್ಥಾನದಲ್ಲಿ ಜಾರಿಗೆ ಬಂದ ಇ - ಹುಂಡಿ)

ABOUT THE AUTHOR

...view details