ಚಾಮರಾಜನಗರ :ಲಾಠಿ ಬೀಸಿಯಾಯ್ತು, ಮುಂಡಿಯೂರಿ ಕೂರಿಸಿಯಾಯ್ತು, ಬೈಕ್ಗಳನ್ನು ಸೀಜ್ ಮಾಡಿದರೂ ಜಗ್ಗದೇ ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಕೈಮುಗಿದು ಪ್ರಾರ್ಥಿಸಿದ್ರು. ನಗರದ ಭುವನೇಶ್ವರಿ ವೃತ್ತದಲ್ಲಿ ಅನಗತ್ಯ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಅಡ್ಡಗಟ್ಟಿ ನಿಮ್ಮ ಪ್ರಾಣ ರಕ್ಷಣೆಗಾಗಿ ಬೇಡುತ್ತಿದ್ದೇವೆ. ಮನೆಯಲ್ಲಿದ್ದರೇ ನೀವು ಸುರಕ್ಷಿತರಾಗಿರುತ್ತೀರಿ. ಕೊರೊನಾಗೆ ತುತ್ತಾದರೆ ಸಂಸಾರ ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬರಬೇಡಿ ಕಣ್ರಾಪ್ಪಾ.. ಬೀದಿಗಿಳಿದ ಸವಾರರಿಗೆ ಕೈಮುಗಿದು ಪ್ರಾರ್ಥಿಸಿದ ಎಸ್ಪಿ.. - ಕೊರೊನಾಗೆ ತುತ್ತಾದರೇ ಸಂಸಾರ ಬೀದಿಗೆ
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಅಡ್ಡಗಟ್ಟಿ, ನಿಮ್ಮ ಪ್ರಾಣ ರಕ್ಷಣೆಗಾಗಿ ಬೇಡುತ್ತಿದ್ದೇವೆ. ಮನೆಯಲ್ಲಿದ್ದರೇ ನೀವು ಸುರಕ್ಷಿತರಾಗಿರುತ್ತೀರಿ. ಕೊರೊನಾಗೆ ತುತ್ತಾದರೇ ಸಂಸಾರ ಬೀದಿಗೆ ಬರಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ಕೈ ಮುಗಿದು ಪ್ರಾರ್ಥಿಸಿದ್ರು.
ಬೀದಿಗಿಳಿದ ಸವಾರರಿಗೆ ಕೈಮುಗಿದು ಪ್ರಾರ್ಥಿಸಿದ ಎಸ್ಪಿ
ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮಾಡಲು ಕೇವಲ 21 ದಿನ ಮನೆಯಲ್ಲಿರಿ. ಅಗತ್ಯ ವಸ್ತುಗಳು ನೀವು ವಾಸಿಸುವ ಸ್ಥಳಗಳಲ್ಲೇ ಸಿಗಲಿದೆ. ಅನಗತ್ಯವಾಗಿ ರಸ್ತೆಗಿಳಿದು ಅಪಾಯ ತಂದುಕೊಳ್ಳಬೇಡಿ. ಇದೇ ನಿಮಗೆ ಕಡೆಯ ಎಚ್ಚರಿಕೆ, ಇನ್ನೊಮ್ಮೆ ಅನಗತ್ಯವಾಗಿ ರಸ್ತೆಗಿಳಿದರೆ ವಾಹನ ಮುಟ್ಟುಗೋಲು ಹಾಕಿಕೊಂಡು ಲಾಕ್ಡೌನ್ ಮುಗಿಯುವವರೆಗೆ ನೀಡುವುದಿಲ್ಲ ಎಂದು ಎಚ್ಚರಿಸಿದರು. ಚಾಮರಾಜನಗರ ಡಿವೈಎಸ್ಪಿ ಮೋಹನ್, ಸಿಬಿಐ ನಾಗೇಗೌಡ, ಪಿಎಸ್ಐ ಸಿದ್ದರಾಜನಾಯ್ಕ ಇನ್ನಿತರರು ಇದ್ದರು.