ಚಾಮರಾಜನಗರ:ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದು, ಬೇಟೆಗಾರರು ಪರಾರಿಯಾಗಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಬಂಡಳ್ಳಿ ಮಾದಪ್ಪನ ಹಳ್ಳದಲ್ಲಿ ನಡೆದಿದೆ.
ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ: ಆರೋಪಿಗಳು ಪರಾರಿ - ಚಾಮರಾಜನಗರ
ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಯಾಡಿದ ಜಿಂಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ..
ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಯಾಡಿದ ಜಿಂಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಅಂಡೇಕುರುಬರದೊಡ್ಡಿಯ ಮೂರ್ತಿ ಹಾಗೂ ಸೀನಿದೊಡ್ಡಿಯ ರಾಮು ಪರಾರಿಯಾಗಿರುವ ಆರೋಪಿಗಳು ಎನ್ನಲಾಗಿದೆ.
ಸದ್ಯ 50 ಕೆಜಿ ತೂಕವಿರುವ ಗಂಡು ಜಿಂಕೆಯ ಕಳೇಬರ ಹಾಗೂ ಬೈಕ್ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.