ಕರ್ನಾಟಕ

karnataka

ETV Bharat / state

ಚಾಮರಾಜನಗರ: ಬೈಕ್‌ಗಳಿಗೆ ಪ್ರವಾಸಿ ಬಸ್ ಡಿಕ್ಕಿಯಾಗಿ ಓರ್ವ ಸಾವು; ಮತ್ತೋರ್ವನ ಕಾಲು ಕಟ್ - ETV Bharat kannada News

ಚಾಮರಾಜನಗರ ಜಿಲ್ಲೆಯಲ್ಲಿಂದು ನಡೆದ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ.

Tourist bus collides with bikes
ಬೈಕ್ ಗಳಿಗೆ ಪ್ರವಾಸಿ ಬಸ್ ಡಿಕ್ಕಿ

By

Published : Apr 4, 2023, 6:15 PM IST

ಚಾಮರಾಜನಗರ : ಪ್ರವಾಸಿಗರಿದ್ದ ಬಸ್ಸೊಂದು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಇಳಿದ ಘಟನೆ ಗುಂಡ್ಲುಪೇಟೆ ಪಟ್ಟಣದ ಮೈಸೂರು-ಊಟಿ ಹೆದ್ದಾರಿಯಲ್ಲಿರುವ ಅಸ್ಸಿಸಿ ಆಸ್ಪತ್ರೆ ಬಳಿ ಇಂದು ನಡೆಯಿತು. ಘಟನೆಯಲ್ಲಿ ಬೈಕ್​ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಕಾಲು ಮುರಿದಿದೆ. ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ರಾಜು (45) ಮೃತ ದುರ್ದೈವಿ. ಕಾಲು ಮುರಿತಕ್ಕೊಳಗಾದ ವ್ಯಕ್ತಿಯನ್ನು ತಾಲೂಕಿನ ಕಿಲಗೆರೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅರುಣಾಚಲ ಪ್ರದೇಶದ ಮೂಲದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಲಾರಿ ಪಂಚರ್, ಮುಸುಕಿನ ಜೋಳ ಗುಳುಂ ಮಾಡಿದ ಗಜರಾಜ- ವಿಡಿಯೋ

ಲಾರಿ ಪಲ್ಟಿ:ನಿಯಂತ್ರಣ ತಪ್ಪಿದ ಸರಕು ತುಂಬಿದ ಲಾರಿಯೊಂದು ಮೈಸೂರು-ಊಟಿ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ತಾಲೂಕಿನ‌ ಅಗತಗೌಡನಹಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸರಕು ಚೀಲಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಬುದ್ಧಿಮಾಂದ್ಯನಿಂದ ವಾಹನಗಳಿಗೆ ಕಲ್ಲೇಟು :ಮಾನಸಿಕ‌ ಅಸ್ವಸ್ಥನೊಬ್ಬ ರಂಪ ನಡೆಸಿರುವ ಘಟನೆ ಚಾಮರಾಜನಗರದಲ್ಲಿಂದು ನಡೆಯಿತು. ಈತ ತನ್ನೆದುರಿಗೆ ಬರುತ್ತಿದ್ದ ವಾಹನಗಳಿಗೆ ಕಲ್ಲೆಸೆದಿದ್ದು ಹಲವು ವಾಹನಗಳ ಗಾಜು ಪುಡಿಯಾಗಿದೆ. ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಯಳಂದೂರಲ್ಲಿ 12 ಟನ್​​ ಅಕ್ಕಿ ವಶ.. ಚಾಮರಾಜನಗರದಲ್ಲಿ ಗೃಹಿಣಿ ಕೊಲೆ ಆರೋಪ

ಅಬಕಾರಿ ದಾಳಿ:ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ನೀತಿ ಸಂಹಿತೆ ಜಾರಿಯಾಗಿದ್ದು, ಚಾಮರಾಜನಗರ ಜಿಲ್ಲಾ ಅಬಕಾರಿ ಇಲಾಖೆ ಹೈ ಅಲರ್ಟ್ ಆಗಿದೆ. ಇಂದು ಬಸ್‌ ಮೂಲಕ ಅಕ್ರಮ‌ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ನಾಗರಾಜು ಬಂಧಿತ ಆರೋಪಿ. ಈತ ಮೈಸೂರಿನಿಂದ ಎರಡು ಚೀಲಗಳಲ್ಲಿ ಮದ್ಯ ತರುತ್ತಿದ್ದುದನ್ನು ಪತ್ತೆ ಹಚ್ಚಿದ್ದ ಅಬಕಾರಿ ಅಧಿಕಾರಿಗಳು 10 ಸಾವಿರ ಮೌಲ್ಯದ 26.65 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ :ಚಾಮರಾಜನಗರ: 7 ವರ್ಷದ ಬಾಲೆ ಮೇಲೆ ಅತ್ಯಾಚಾರ: ಕಾಮುಕನಿಗೆ 20 ವರ್ಷ ಕಠಿಣ ಶಿಕ್ಷೆ

ABOUT THE AUTHOR

...view details