ಕರ್ನಾಟಕ

karnataka

ETV Bharat / state

ಈ ಕಾಲೋನಿಗೆ ಹೊರಗಿನವರ ಪ್ರವೇಶ ನಿಷಿದ್ಧ: ಇದು ಇಲ್ಲಿನ ಜನರ ನಿರ್ಧಾರ

ಸ್ಥಳೀಯ ನಿವಾಸಿಗಳು ಕೊಳ್ಳೇಗಾಲ ಪಟ್ಟಣದ ಮೇದರ ಬೀದಿ. ಹಾಗೂ ಈಡಿಗರ ಬಡಾವಣೆಯ ಬೀದಿಗಳನ್ನು ಸ್ವಯಂ ಬಂದ್ ಮಾಡಿ, ಕೊರೊನಾ ವಿರುದ್ದ ಘೋಷಣೆ ಕೂಗಿದ್ದಾರೆ.

road block
ಮೇದರ ಬೀದಿ ನಿರ್ಬಂಧ

By

Published : Mar 26, 2020, 3:10 PM IST

ಕೊಳ್ಳೇಗಾಲ: ಕೊರೊನಾ ಕಾಯಿಲೆ ನಿರ್ಮೂಲನೆಯಾಗುವವರೆಗೂ ನಮ್ಮ ಕಾಲೊನಿಗೆ ಹೊರಗಿನವರ ಅವಕಾಶ ನಿರ್ಬಂಧಿಸಲಾಗಿದೆ. ನಾವು ಸಹ ಹೊರಗೆ ಬರುವುದಿಲ್ಲ, ನಮ್ಮ ರಕ್ಷಣೆ ದೇಶ ರಕ್ಷಣೆ ಎಂಬ ಫಲಕ ಅಳವಡಿಸುವ ಮೂಲಕ ಕೊಳ್ಳೇಗಾಲ ಮೇದಾರ ಕಾಲೊನಿಯ ನಿವಾಸಿಗಳು ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿದ್ದಾರೆ.

ಹೊರಗಿನವರಿಗೆ ಕಾಲೊನಿ ಪ್ರವೇಶ ನಿರ್ಬಂಧಿಸಿದ ಕೊಳ್ಳೇಗಾಲ ಜನತೆ

ಸ್ಥಳೀಯ ನಿವಾಸಿಗಳು ಕೊಳ್ಳೇಗಾಲ ಪಟ್ಟಣದ ಮೇದರ ಬೀದಿ. ಹಾಗೂ ಈಡಿಗರ ಬಡಾವಣೆಯ ಬೀದಿಗಳನ್ನು ಸ್ವಯಂ ಬಂದ್ ಮಾಡಿ, ಕೊರೊನಾ ವಿರುದ್ದ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಕಾಲೊನಿಯ ಮಾಜಿ ನಗರಸಭಾ ಸದಸ್ಯ ಸುರೇಶ್ ಮಾತನಾಡಿ ಕೊರೊನಾ ಕಡಿವಾಣಕ್ಕೆ ಸರ್ಕಾರ ಮುಂಜಾಗ್ರತಾ ಕ್ರಮವಹಿಸಿದೆ. ಸಾರ್ವಜನಿಕರು ಆದೇಶಗಳನ್ನು ಉಲಂಘಿಸದೇ ಕಾನೂನಿನ ಪರವಾಗಿ ಕೆಲಸಮಾಡಬೇಕು. ನಮ್ಮ ಮನೆಯಲ್ಲಿ ನಾವು ಇರುತ್ತೇವೆ. ನಿಮ್ಮ ಮನೆಯಲ್ಲಿ ನೀವೂ ಇರಿ ಎಂದಿದ್ದಾರೆ.

ಕಾಲೊನಿಯ ಮುಖಂಡ ಸೋಮಪ್ಪ ಮಾತನಾಡಿ, ಪ್ರಧಾನಿ ಕರೆಗೆ ಎಲ್ಲರೂ ಸಹಕರಿಸಬೇಕು ಆಗಿದ್ದಾಗ ಮಾತ್ರ ನಮ್ಮವರನ್ನು ನಮ್ಮ ದೇಶವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಪಟ್ಟಣದಲ್ಲಿ ಸಂಪೂರ್ಣ ಬಿಗಿ ಬಂದೋಬಸ್ತ್ ಮಾಡಿ ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿದೆ.

ABOUT THE AUTHOR

...view details