ಕರ್ನಾಟಕ

karnataka

ETV Bharat / state

ಚಿಕ್ಕಲ್ಲೂರು ಜಾತ್ರೆ ಆರಂಭ: ದಕ್ಷಿಣ ದಿಕ್ಕಿಗೆ ವಾಲಿದ ಚಂದ್ರಮಂಡಲ - ಚಾಮರಾಜನಗರ

ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ ಪ್ರಾರಂಭ-ದಕ್ಷಿಣ ದಿಕ್ಕಿಗೆ ವಾಲಿದ ಚಂದ್ರಮಂಡಲ-ವಾಲಿದ ಕಡೆ ಮಳೆ-ಬೆಳೆ ಎಂಬ ನಂಬಿಕೆ ಭಕ್ತರಿಗೆ

Chikallur fair
ಚಿಕ್ಕಲ್ಲೂರು ಜಾತ್ರೆ

By

Published : Jan 7, 2023, 12:19 PM IST

Updated : Jan 7, 2023, 12:55 PM IST

ಚಿಕ್ಕಲ್ಲೂರು ಜಾತ್ರೆ

ಚಾಮರಾಜನಗರ:ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ, ಲಕ್ಷಾಂತರ ಮಂದಿ ಭಾಗಿಯಾಗುವ ಕೊಳ್ಳೇಗಾಲ ತಾಲೂಕಿನ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆಯು ಶುಕ್ರವಾರದಿಂದ ಆರಂಭಗೊಂಡಿದ್ದು ಭಕ್ತಸಾಗರದ ನಡುವೆ ಚಂದ್ರಮಂಡಲ ನಡೆದಿದೆ. ಶುಕ್ರವಾರ ರಾತ್ರಿ ಬೊಪ್ಪೆಗೌಡನಪುರದ ಪೀಠಾಧಿಪತಿ ಚೆನ್ನರಾಜೇ ಅರಸ್ ಸಾಂಪ್ರದಾಯಿಕವಾಗಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಿ ಅಧಿಕೃತವಾಗಿ 5 ದಿನಗಳ ಜಾತ್ರೆಗೆ ಚಾಲನೆ ಕೊಟ್ಟರು.

ವಾಲಿದ ಕಡೆ ಮಳೆ ಬೆಳೆ ಎಂಬ ನಂಬಿಕೆ.. ಚಂದ್ರಮಂಡಲ‌ ಉರಿಯುತ್ತ ಯಾವ ದಿಕ್ಕಿಗೆ ವಾಲುತ್ತದೆಯೋ ಆ ದಿಕ್ಕಿಗೆ ವರ್ಷಪೂರ್ತಿ ಮಳೆ-ಬೆಳೆ ಎಂಬ ನಂಬಿಕೆ ಇದ್ದು, ಈ ಬಾರಿ ದಕ್ಷಿಣ ದಿಕ್ಕಿಗೆ ಚಂದ್ರಮಂಡಲ ವಾಲಿದೆ. ಚಂದ್ರಮಂಡಲದ ನಡುವೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಈ ಜಾತ್ರೆಗೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಗ್ರಾಮಪಂಚಾಯಿತಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದು ಭಕ್ತರಿಗೆ ಕುಡಿಯುವ ನೀರು, ಆಸ್ಪತ್ರೆ, ಮುಂತಾದ ಸೌಲಭ್ಯಗಳ ವ್ಯವಸ್ಥೆ ಮಾಡಿದೆ. ಜ.6 ರ ರಾತ್ರಿ ನಡೆದ ಚಂದ್ರಮಂಡಲೋತ್ಸವದೊಂದಿಗೆ ಜಾತ್ರೆಗೆ ಚಾಲನೆ ಸಿಕ್ಕಿದ್ದು ಇಂದು ಎರಡನೇ ದಿನ ದೊಡ್ಡವರ ಸೇವೆ, ಮೂರನೇ ದಿನ ಭಾನುವಾರ ಮುಡಿಸೇವೆ, ನಾಲ್ಕನೇ ದಿನ ಸೋಮವಾರ ಪಂಕ್ತಿಸೇವೆ ಹಾಗೂ ಮಂಗಳವಾರ ನಡೆಯುವ ಮುತ್ತತ್ತಿರಾಯನ ಸೇವೆಯೊಂದಿಗೆ ಐದು ದಿನಗಳ ಜಾತ್ರೆಗೆ ತೆರೆಬೀಳಲಿದೆ.

ಪ್ರಾಣಿ ಬಲಿ ನಿಷೇಧ:ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕಲೂರು ಹೊಸ ಮಠದಲ್ಲಿ ಜನವರಿ 6 ರಿಂದ 10 ರವರೆಗೆ ನಡೆಯಲಿರುವ ಶ್ರೀ ಘನಲೀಲ ಸಿದ್ದಪ್ಪಾಜಿ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಭಕ್ತಾದಿಗಳು/ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ/ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಪ್ರಾಣಿಬಲಿ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಜಾತ್ರೆಗೆ ಕುರಿ, ಕೋಳಿ, ಮೇಕೆ ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಇನ್ನಿತರ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ 5 ಚೆಕ್ ಪೋಸ್ಟ್ ತೆರೆಯಲಾಗಿದೆ, ಪ್ರಾಣಿ ಬಲಿ ವಿಚಾರದಲ್ಲಿ ಕೆಲ ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಭಕ್ತ ಸಮೂಹಕ್ಕೆ ಜಟಾಪಟಿ ಇದ್ದು ಕೊನೆಗೂ ಭಕ್ತರ ನಂಬಿಕೆ, ಆಚಾರವೇ ಗೆಲ್ಲುತ್ತಾ ಬರುತ್ತಿದೆ.

ಕಟ್ಟುನಿಟ್ಟಾಗಿ ಪ್ರಾಣಿ ಬಲಿ ತಡೆ:ಇನ್ಮು, ಪ್ರಾಣಿದಯಾ ಸಂಘದ ಮುಖ್ಯಸ್ಥ ದಯಾನಂದ ಸ್ವಾಮೀಜಿ‌ ಇತ್ತೀಚೆಗೆ ಮಾಧ್ಯಮಗೋಷ್ಟಿ ನಡೆಸಿ " ಚಿಕ್ಕಲ್ಲೂರು ಜಾತ್ರೆ, ಬಿಳಿಗಿರಿರಂಗನ ಬೆಟ್ಟದ ಜಾತ್ರೆ, ಕುರುಬನ ಕಟ್ಟೆ ಜಾತ್ರೆ, ಶಿಂಷಾ ಮಾರಮ್ಮನ ಜಾತ್ರೆಯಲ್ಲಿ ಕಟ್ಟುನಿಟ್ಟಾಗಿ ಪ್ರಾಣಿ ಬಲಿಯನ್ನು ತಡೆಯಬೇಕೆಂದು ಒತ್ತಾಯಿಸಿದ್ದರು.

ಎಲ್ಲೆಡೆ ನಡೆಯುತ್ತಿದೆ ಜಾತ್ರೋತ್ಸವಗಳು:ರಾಜ್ಯದ ಹಲವೆಡೆ ಜಾತ್ರ ಮಹೋತ್ಸವವು ನಡೆಯುತ್ತಿದ್ದು ಲಕ್ಷಾಂತರ ಭಕ್ತರು ತಮ್ಮ ದೇವರ ದರ್ಶನದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಹುಣ್ಣಿಮೆ ದಿನದಂದು ಬಾಗಲಕೋಟೆಯ ಧಾರ್ಮಿಕ ಕೇಂದ್ರ ಹಾಗು ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರೆಯು ನಡೆದಿದೆ.

ಇನ್ನು, ಶಿವಮೊಗ್ಗದಲ್ಲಿ ನಿನ್ನೆ ಅದ್ಧೂರಿಯಾಗಿ ತುಂಗಾ ನದಿಯಲ್ಲಿ ದೇವರ ತೆಪ್ಪೋತ್ಸವ ಜರುಗಿತು. ಅಲ್ಲಿನ ಪ್ರಸಿದ್ಧ ಕೋಟೆ ಶ್ರೀ ಸೀತರಾಮ ದೇವರ ಕಲ್ಯಾಣೋತ್ಸವ ನಡೆದ ಮೇಲೆ ಈ ಉತ್ಸವ ನಡೆದಿದೆ. ಹಾಗೆ ಕೊಪ್ಪಳದ ಗವಿ ಮಠದಲ್ಲಿಯಂತೂ ಬಹಳ ವಿಜೃಂಭಣೆಯಿಂದ ತೆಪ್ಪೋತ್ಸವ ನಡೆದಿದ್ದು, ಇಲ್ಲಿ ಮೊದಲ ಬಾರಿಗೆ ಗಂಗಾರತಿಯು ನಡೆದಿದ್ದು, ಭಕ್ತರ ಸಂತೋಷಕ್ಕೆ ಕಾರಣವಾಯಿತು.

ಇದನ್ನೂ ಓದಿ:ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ.. ಸಿದ್ದೇಶ್ವರ ಶ್ರೀಗಳ ಅಗ್ನಿ ಸ್ಪರ್ಶ ಸ್ಥಳಕ್ಕೆ ಪೂಜೆ

Last Updated : Jan 7, 2023, 12:55 PM IST

ABOUT THE AUTHOR

...view details