ಕರ್ನಾಟಕ

karnataka

ETV Bharat / state

ಸಚಿವ ಸುರೇಶ್ ಕುಮಾರ್​​ಗೆ ಕಪ್ಪು ಬಾವುಟ ಪ್ರದರ್ಶನ... 15 ರೈತರ ಬಂಧನ

ಸಂತೇಮರಹಳ್ಳಿಯ ಶಂಕರದೇವನ ಬೆಟ್ಟದ ಬಳಿ ನೂತನ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​​ಗೆ ಕಪ್ಪು ಪಟ್ಟಿ ಪ್ರದರ್ಶಿಸಿದ್ದು, 15 ಮಂದಿ ರೈತರನ್ನು ಪೊಲೀಸರು ಬಂಧಿಸಿದ್ದಾರೆ‌‌.

By

Published : Aug 29, 2020, 12:40 PM IST

Updated : Aug 29, 2020, 1:32 PM IST

black-flag-demonstration-against-minister-suresh-kumar
ಸಚಿವ ಸುರೇಶ್ ಕುಮಾರ್​​ಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನ: 15 ರೈತರ ಬಂಧನ

ಚಾಮರಾಜನಗರ: ನೂತನ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​​ಗೆ ಕಪ್ಪು ಪಟ್ಟಿ ಪ್ರದರ್ಶಿಸಿದ್ದು, 15 ಮಂದಿ ರೈತರನ್ನು ಪೊಲೀಸರು ಬಂಧಿಸಿದ್ದಾರೆ‌‌.

ಸಚಿವ ಸುರೇಶ್ ಕುಮಾರ್​​ಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನ: 15 ರೈತರ ಬಂಧನ

ನಗರದ ಸೋಮವಾರಪೇಟೆಯ ಬಳಿ ರೈತ ಸಂಘದ ಗುರುಪ್ರಸಾದ್ ಮತ್ತು ಸಹ ಕಾರ್ಯಕರ್ತರು ರಸ್ತೆ ವಿಭಜಕದ ಮೇಲೆ‌‌ ನಿಂತು ಸುರೇಶ್ ಕುಮಾರ್​ಗೆ ಕಪ್ಪು ಬಾವುಟ ಪ್ರದರ್ಶಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೂ ಮುನ್ನ ಸಂತೇಮರಹಳ್ಳಿಯ ಶಂಕರದೇವನ ಬೆಟ್ಟದ ಬಳಿ ರೈತ ಸಂಘದ ಕುಮಾರ್, ಪೃಥ್ವಿ, ವಿಜಯ್ ಎಂಬುವರು ಸಚಿವರ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿ ಬಂಧನಕ್ಕೊಳಗಾಗಿದ್ದಾರೆ.

ಇನ್ನು ನಗರದ ಭುವನೇಶ್ವರಿ ವೃತ್ತದ್ದಲ್ಲಿ ಉಗ್ರವಾಗಿ ಪ್ರತಿಭಟಿಸಿ ಸಚಿವರಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರೈತ ಸಂಘದ ಹೊನ್ನೂರು ಪ್ರಕಾಶ್, ಗುರುಪ್ರಸಾದ್, ಕಡಬೂರು ಮಂಜುನಾಥ್ ಸೇರಿದಂತೆ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ‌. ಬಂಧನದಲ್ಲಿರುವ ರೈತರು ಸಚಿವ ಸುರೇಶ್ ಕುಮಾರ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಅಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿದ್ದೇವೆ. ಅದೇ ರೀತಿ ಮಸಿಯನ್ನು ಬಳಿಯುತ್ತೇವೆ ಎಂದು ರೈತ ಸಂಘದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಪೋಸ್ಟ್​ ಹಾಕಿದ್ಧಾರೆ.

Last Updated : Aug 29, 2020, 1:32 PM IST

ABOUT THE AUTHOR

...view details