ಕರ್ನಾಟಕ

karnataka

ETV Bharat / state

ಕ್ಷಿಪ್ರ ರಾಜಕೀಯ ಬೆಳವಣಿಗೆ: ನಾಯಕರ ಜತೆ ಚರ್ಚೆ ನಂತ್ರ ಅಂತಿಮ ತೀರ್ಮಾನವೆಂದ್ರು ಡಿಕೆಶಿ - jds

ಸಚಿವ ಡಿ.ಕೆ. ಶಿವಕುಮಾರ್ ದೇವೇಗೌಡರನ್ನು ಭೇಟಿಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆ ಬಗ್ಗೆ ನಮ್ಮ ಪಕ್ಷದ ನಾಯಕರು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

DKSHIVAKUMAR

By

Published : Jul 7, 2019, 3:18 PM IST

ಬೆಂಗಳೂರು:ನಮ್ಮ ನಾಯಕರ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೇವೇಗೌಡರ ಭೇಟಿ ಕುರಿತು ಪ್ರತಿಕ್ರಿಯಿಸುತ್ತಿರುವ ಸಚಿವ ಡಿಕೆಶಿ
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಅವರು, ಸುಮಾರು ದಿನದಿಂದ‌ ದೇವೇಗೌಡರನ್ನು ಭೇಟಿ ಮಾಡಿರಲಿಲ್ಲ. ಇಂದು ದೇವೇಗೌಡರನ್ನ ಭೇಟಿ ಮಾಡಲು ಬಂದಿದ್ದೆ. ಇದು ಸೌಹಾರ್ದ ಭೇಟಿಯಷ್ಟೇ. ಬೇರೆ ಏನು ಕಾರಣ ಇಲ್ಲ. ನಮ್ಮ ಪಕ್ಷದ ನಾಯಕರು ಸಂಜೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಏನು ಮಾಡಬೇಕು ಅಂತ ತೀರ್ಮಾನಿಸುತ್ತೇವೆ ಎಂದು ವಿವರಿಸಿದರು.
ನಮ್ಮ ‌ನಾಯಕರು ಸಹ ಬಂದಿದ್ದಾರೆ. ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಸಂಜೆ ಜೆಡಿಎಸ್ ಸಭೆ ಕೂಡ ನಡೆಯಲಿದೆ. ನಮ್ಮ ನಾಯಕರೆಲ್ಲರೂ ಬಂದಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ ಮುಂದಿನ ಬೆಳವಣಿಗೆ ಬಗ್ಗೆ ತಿಳಿಸುತ್ತೇವೆ ಎಂದು ಸಚಿವ ಡಿಕೆಶಿ ಸ್ಪಷ್ಟಪಡಿಸಿದರು.

ABOUT THE AUTHOR

...view details