ಕರ್ನಾಟಕ

karnataka

ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್​ನಲ್ಲಿ ಅಸಭ್ಯ ಜಾಹೀರಾತು: ಸಾರ್ವಜನಿಕರ ಆಕ್ರೋಶ

By

Published : May 30, 2019, 3:01 PM IST

ಸರ್ಕಾರಿ ಸ್ವಾಮ್ಯದ ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್​ನಲ್ಲಿ ಅಶ್ಲೀಲ, ಅಸಭ್ಯ ಜಾಹಿರಾತುಗಳು ಪ್ರಕಟವಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಹಿಸಿದ್ದಾರೆ.

ಲ್ವೇ ಇಲಾಖೆ

ಬೆಂಗಳೂರು:ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್ ಆ್ಯಪ್​ನಲ್ಲಿ ಅಸಭ್ಯ ಜಾಹಿರಾತು ಪ್ರಕಟವಾಗುತ್ತಿದ್ದು, ರೈಲ್ವೇ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ರೈಲ್ವೇ ‌ಟಿಕೆಟ್ ಬುಕ್ ಮಾಡೋಕೆ ವೈಬ್​ಸೈಟ್‍ಗೆ ಹೋದರೆ ಅಲ್ಲಿ ಅಶ್ಲೀಲ, ಅಸಭ್ಯ ಜಾಹಿರಾತುಗಳದ್ದೇ ಕಾರುಬಾರು‌ ಜಾಸ್ತಿಯಾಗಿದೆ. ಹೀಗಾಗಿ‌ ಸಾರ್ವಜನಿಕರು ರೈಲ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾ ಪೋಸ್ಟ್​

ಸರ್ಕಾರಿ ಸ್ವಾಮ್ಯದ ವೆಬ್​ಸೈಟ್​ಗಳಲ್ಲಿ ಈ ರೀತಿ ಜಾಹಿರಾತು ಪ್ರಕಟವಾಗುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ವಿಚಾರ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ, ಅಶ್ಲೀಲ ಜಾಹೀರಾತುಗಳನ್ನ ಪ್ರಕಟ ಮಾಡಿರುವುದು ಗೂಗಲ್, ಹಾಗಾಗಿ ಅವರೆ ಇದಕ್ಕೆ ಹೊಣೆ. ಹಾಗೆಯೇ ಇದರ ಜವಾಬ್ದಾರಿಯನ್ನ ಕೇಂದ್ರ ರೈಲ್ವೇ ಇಲಾಖೆ ವಹಿಸಬೇಕು ಎಂದು ಹೇಳಿದ್ದಾರೆ.

TAGGED:

ABOUT THE AUTHOR

...view details