ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಎರಡು ರಾಜ್ಯದ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಾಣು ಸೋಂಕು ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಎರಡನೇಯ ಅಲೆಯ ಆರಂಭದಲ್ಲೇ 25 ಕ್ಕೂ ಅಧಿಕ ಜನರು ಸಾವನಪ್ಪಿದ್ದಾರೆ. ಅತೀ ವೇಗವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಹಳ್ಳಿ ಜನರು ಸ್ವಯಂ ಲಾಕ್ ಡೌನ್ ಮಾಡಿಕೊಂಡರೆ. ಜಿಲ್ಲಾಡಳಿತ ತ್ವರಿತ ಚಿಕಿತ್ಸೆ ನೀಡುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದೆ.
ಹೌದು, ಗಡಿ ಜಿಲ್ಲೆ ಬೀದರ್ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ದಿನ ಒಂದಕ್ಕೆ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ 300 ಗಡಿ ದಾಟುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪರದಾಡುವಂತ ಪರಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಕೋವಿಡ್ ಟೆಸ್ಟ್ ಮಾಡಿಸಲು ಸಹ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದೊದಗಿದೆ.
ಇನ್ನು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣ ಮತ್ತು ಸಾವಿನ ಪ್ರಕರಣಗಳು ಹೆಚ್ಚಾದ ಕಾರಣ 19 ದಿನದಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿಗೆ ಹೆದರಿ ಬೀದರ್ ತಾಲೂಕಿನ ಬಾವಗಿ, ನೆಲವಾಡ, ಸಂಗೋಳಗಿ, ಚಿಟಗುಪ್ಪಾ ತಾಲೂಕಿನ ರೇಕುಳಗಿ, ನಿಡವಂಚಾ, ಬಂಬುಳಗಿ, ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಗ್ರಾಮವನ್ನ ಲಾಕ್ಡೌನ್ ಮಾಡಿಕೊಂಡು ರೋಗ ಹರಡದಂತೆ ಎಚ್ಚರಿಕೆ ವಹಿಸಿಕೊಂಡಿದ್ದಾರೆ.