ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್​ ಜುಲ್ಫೇಕರ್ ಹಾಸ್ಮಿ ಹೇಳಿದರು.

By

Published : Dec 20, 2019, 7:54 PM IST

Updated : Dec 21, 2019, 8:02 PM IST

The Citizenship Amendment Bill is discriminatory: former legislator Hasmi
ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್​ ಜುಲ್ಫೇಕರ್ ಹಾಸ್ಮಿ ಹೇಳಿದರು.

ಬಹುಜನ ಕ್ರಾಂತಿ ಮೋರ್ಚಾದಿಂದ ಸ್ಥಳೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಮಿನಿ ವಿಧಾನ ಸೌಧದ ತಹಸೀಲ್ ಕಚೇರಿಗೆ ಅವರು ಆಗಮಿಸಿದ್ದರು. ಈ ವೇಳೆ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.

ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ. ಇದು ಮುಸ್ಲಿಂ ವಿರೋಧಿಯಷ್ಟೇ ಅಲ್ಲ, ಎಸ್‌ಸಿ/ಎಸ್‌ಟಿ, ಒಬಿಸಿ, ಸೇರಿದಂತೆ ಅನೇಕ ಸಮುದಾಯಗಳಿಗೆ ವಿರೋಧಿಯಾಗಿದೆ. ದೇಶದ ಅಖಂಡತೆಗಾಗಿ ದೇಶದಾದ್ಯಂತ ಆಂದೋಲನ ಮಾಡಲಿದ್ದೇವೆ ಎಂದರು.

ಹೋರಾಟದ ಪ್ರಥಮ ಭಾಗವಾಗಿ ಎಲ್ಲೆಡೆ ಇಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜನವರಿ 3 ರಂದು ಜಾಥಾ ನಡೆಸಲಾಗುವುದು. ಅನಂತರ ಜನವರಿ 30ರಂದು ಭಾರತ ಬಂದ್ ಮಾಡುವ ಯೋಚನೆಯೂ ಇದೆ ಎಂದರು.

ಇನ್ನೂ ಹಾಸ್ಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಸುನೀಲ್​ ಕುಮಾರ್​ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ, ಅಷ್ಟರಲ್ಲಾಗಲೇ ಅವರು ಮನವಿ ಪತ್ರ ಸಲ್ಲಿಸಿ ತೆರಳಿದ್ದರು.

Last Updated : Dec 21, 2019, 8:02 PM IST

ABOUT THE AUTHOR

...view details