ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ತಲ್ವಾರ್​ ಹಿಡಿದು ಯುವಕರ ಪುಂಡಾಟ: ಲಾಠಿ ರುಚಿ ತೋರಿಸಿದ ಪೊಲೀಸರು

ಕೆಲ​ ಯುವಕರು ತಲ್ವಾರ್​​ ಹಿಡಿದು ಪುಂಡಾಟ ಮೆರೆದಿರುವ ಘಟನೆ ಬೀದರ್​ನಲ್ಲಿ ನಡೆದಿದೆ. ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಸಿಖ್ ಯುವಕರ ಪುಂಡಾಡ
ಸಿಖ್ ಯುವಕರ ಪುಂಡಾಡ

By

Published : Nov 9, 2022, 6:09 PM IST

Updated : Nov 9, 2022, 6:23 PM IST

ಬೀದರ್​: ಪುಂಡಾಟ ಮೆರೆದ ಯುವಕರನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಘಟನೆ ಬೀದರ್​ನ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ಯುವಕರು ತಲವಾರ್ ಜಳಪಿಸುತ್ತಿರುವಾಗ ಓರ್ವ ವ್ಯಕ್ತಿಯ ಕೈಗೆ ಗಾಯವಾಗಿದ್ದು, ಪೊಲೀಸರು ಯುವಕರಿಗೆ ಲಾಠಿ ರುಚಿ ತೋರಿಸಿದ್ದಾರೆ.

ಮಂಗಳವಾರ ಗುರುನಾನಕ್ ಜಯಂತಿ ಆಚರಿಸಲಾಗಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ ದೇಶದ ವಿವಿಧ ಕಡೆಯಿಂದ ಆಗಮಿಸಿದ್ದ ನೂರಾರು ಯುವಕರು, ಬೀದರ್​ನ ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಲ್ವಾರ್​ ಹಿಡಿದುಕೊಂಡು ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿ ಪುಂಡಾಟ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೀದರ್​ನಲ್ಲಿ ತಲ್ವಾರ್​ ಹಿಡಿದು ಯುವಕರ ಪುಂಡಾಟ

ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕೈಯಲ್ಲಿ ಖಡ್ಗ ಹಿಡಿದು, ಓವರ್ ಸ್ಪೀಡ್ ಬೈಕ್ ಚಲಾಯಿಸಿದ ಸಿಖ್ ಯುವಕರ ಪುಂಡಾಟ ಕಂಡು ಸ್ವತಃ ಡಿವೈಎಸ್ಪಿ ಸತೀಶ್, ಸಿಪಿಐ ಹಿರೇಮಠ ಮಧ್ಯಪ್ರವೇಶಿಸಿದರು. ಅವರಿಗೂ ಯುವಕರು ಖಡ್ಗ ತೋರಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಮೇಲೆ ತಲವಾರ್​​​ನಿಂದ ದಾಳಿ

Last Updated : Nov 9, 2022, 6:23 PM IST

ABOUT THE AUTHOR

...view details