ಕರ್ನಾಟಕ

karnataka

ETV Bharat / state

ಶರಣ ಕಾಯಕ ಭೂಮಿಯಲ್ಲಿ 'ಕಲ್ಯಾಣ ಕರ್ನಾಟಕ' ಮಹೋತ್ಸವ

ಹೈದ್ರಾಬಾದ್​ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಮರು ನಾಮಕರಣ ಮಾಡಿದ ಸರ್ಕಾರದ ಕ್ರಮ ಸ್ವಾಗತಿಸಿ, ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.

By

Published : Sep 17, 2019, 9:52 PM IST

ಶರಣರ ಕಾಯಕ ಭೂಮಿಯಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವ

ಬಸವಕಲ್ಯಾಣ: ಹೈದ್ರಾಬಾದ್​ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ'ವೆಂದು ನಾಮಕರಣ ಮಾಡಿದ ಸರ್ಕಾರದ ಕ್ರಮ ಸ್ವಾಗತಿಸಿ, ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.

ಶರಣರ ಕಾಯಕ ಭೂಮಿಯಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವ

ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕರಾಗಿರುವ ಮಹಾರಾಷ್ಟದ ನಿರಗೂಡಿಯ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನೇತೃತ್ವದಲ್ಲಿ ನಗರದಲ್ಲಿ ಭವ್ಯ ಮೆರವಣಿಗೆ ಜರುಗಿತು.

ಇಲ್ಲಿಯ ಸಸ್ತಾಪೂರ ಬಂಗ್ಲಾದಿಂದ ನಗರದ ರಥ ಮೈದಾನದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆದ ಮೆರವಣಿಗೆಯಲ್ಲಿ ನಗರ ಸೇರಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಆಗಮಿಸಿದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡರು. ಸುಮಾರು 50ಕ್ಕೂ ಅಧಿಕ ರೀತಿಯ ವಾಹನಗಳಲ್ಲಿ ಭಾರತ ಮಾತೆ, ಗುರು ಬಸವಣ್ಣ, ಅಲ್ಲಮ ಪ್ರಭುದೇವರು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವರು ಸೇರಿದಂತೆ 12ನೇ ಶತಮಾತದಲ್ಲಿ ವಚನ ಚಳುವಳಿ ನಡೆಸಿದ ಶರಣರ ಭಾವಚಿತ್ರಗಳನ್ನಿಟ್ಟು ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ನೇತೃತ್ವವಹಿಸಿದ ಶ್ರೀ ಮಲ್ಲಿನಾಥ ಮಹಾರಾಜರು ತಾವೇ ಸ್ವತಃ ವಾಹನ ಚಲಾಯಿಸುತ್ತಾ ದಾರಿಯಲ್ಲಿ ಬರುವ ಭಕ್ತರಿಗೆ ದರ್ಶನ ನೀಡುತಿದ್ದರು. ಮೆರವಣಿಗೆಯುದ್ದಕ್ಕೂ ಸ್ಥಳೀಯ ಶಾಸಕ ಬಿ.ನಾರಾಯಣರಾವ್​ ಶ್ರೀಗಳ ಪಕ್ಕದಲಿಯೇ ಕುಳಿತು ಗಮನ ಸೆಳೆದರು. ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಡೆದ ಮೆರವಣಿಗೆ ನಂತರ ರಥ ಮೈದಾನದಲ್ಲಿ ಸರ್ವಧರ್ಮ ಸಮಭಾವ ಕಾರ್ಯಕ್ರಮದ ಮೂಲಕ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಸಾಮಾಜಿಕ ಹೋರಾಟಗಾರರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಶಾಸಕ ಬಿ.ನಾರಾಯಣರಾವ್​ ಮಾತನಾಡಿ, 12ನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಗಾಗಿ ನಡೆಸಿದ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲೂ ನಡೆದಿಲ್ಲ. 770 ಜನ ಶರಣರನ್ನು ಕಟ್ಟಿಕೊಂಡು ಬಸವಣ್ಣ ಕಲ್ಯಾಣ ರಾಜ್ಯ ಕಟ್ಟಬೇಕೆಂದು ಹೋರಾಟ ಮಾಡಿದ್ದರು. ಅನುಭವ ಮಂಟಪದ ಮೂಲಕ ಶರಣರು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಪ್ರಜಾ ಪ್ರಭುತ್ವದ ಪರಿಕಲ್ಪನೆ ನೀಡಿದ್ದಾರೆ. ಹೈದ್ರಾಬಾದ್​ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವದರಿಂದ ಶರಣರ ಆಶಯ ಇಂದು ಸಾಕಾರವಾದಂತಾಗಿದೆ ಎಂದರು.

ABOUT THE AUTHOR

...view details