ಕರ್ನಾಟಕ

karnataka

ಐಟಿ ದಾಳಿ ಹಿಂದೆ ಬಿಜೆಪಿಯವರ ಬ್ಲ್ಯಾಕ್ ಮೇಲ್ ರಾಜಕೀಯ: ಖಂಡಿಸಿದ ಖಂಡ್ರೆ

ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಈಶ್ವರ ಖಂಡ್ರೆ ಬಿಜೆಪಿ ವಿರುದ್ಧ ಬೀದರ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

By

Published : Mar 28, 2019, 4:58 PM IST

Published : Mar 28, 2019, 4:58 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಬೀದರ್​​​:ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡುರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೇಲೆ ಐಟಿ ದಾಳಿ ನಡೆಸಿಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ಮಾಡಿದ್ದಾರೆ.

ಬೀದರ್​​​ನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಐಟಿ ದಾಳಿ ವಿಚಾರದಲ್ಲಿ ಕೇಂದ್ರ ಬಿಜೆಪಿ‌ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನ ದುರುಪಯೋಗ ಪಡೆಸಿಕೊಳ್ಳುತ್ತಿದೆ. ದೇಶದ 120 ಕೋಟಿ‌ ಜನ ಇದನ್ನು ನೋಡುತ್ತಿದ್ದಾರೆ. ಸೇಡಿನ, ದ್ವೇಷದ ರಾಜಕೀಯ ನಡೆಸುತ್ತಿರುವ ಬಿಜೆಪಿ, ನಮ್ಮನ್ನ ಹೆದರಿಸಿ, ಬ್ಲಾಕ್ ಮೇಲೆ ಮಾಡುಬೇಕೆಂದು ಹೀಗೆಲ್ಲಾ ಮಾಡುತ್ತಿದೆ. ಆದ್ರೆ ಇದಕ್ಕೆ ಯಾರೂ ಹೆದರುವುದಿಲ್ಲ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಸಿಬಿಐ‌ ನಿರ್ದೇಶಕರನ್ನ ರಾತ್ರೋ ರಾತ್ರಿ ವರ್ಗಾವಣೆ‌ಮಾಡ್ತಾರೆ. ಸುಪ್ರೀಂಕೋರ್ಟ್​ಗೂ ಸುಳ್ಳು ಮಾಹಿತಿ ಯಾಕೆ ಕೊಡಬೇಕು. ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಇವರ ಸರ್ವಾಧಿಕಾರ ದೋರಣೆ ಕೇವಲ ಮೇ. 23ನೇ ತಾರೀಖಿನ ವರೆಗೆ ಮಾತ್ರ ನಡೆಯುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

For All Latest Updates

TAGGED:

ABOUT THE AUTHOR

...view details