ಕರ್ನಾಟಕ

karnataka

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್​..!

ಹೀಗೆ, ಹಚ್ಚ ಹಸುರಿನ ಮಧ್ಯೆ ಇರುವ ಈ ಸ್ಮಾರಕ ನೋಡುಗರನ್ನ ಕ್ಷಣಾರ್ಧದಲ್ಲೇ ಆಕರ್ಷಿಸುತ್ತೆ. ನಾವು ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಲ್ಲಿನ ಸೌಂದರ್ಯ ಸವಿಯಬೇಕು ಅನ್ನಿಸದೇ ಇರದು. ಆದ್ರೆ, ಈ ಸ್ಮಾರಕ ಒಳ ಹೊಕ್ಕಾಗ ಮಾತ್ರ ಬೇಜಾರಾಗೋದು ಖಚಿತ.

By

Published : Apr 15, 2019, 11:33 PM IST

Published : Apr 15, 2019, 11:33 PM IST

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್

ಹೌದು.. ಸುಂದರವಾಗಿ ಕಾಣುತ್ತಿದ್ದ ಸ್ಮಾರಕಗಳ ಮೇಲೆ, ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.. ಬೀದರ್​ನಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿರುವ ಬರೀದ್ ಶಾಯಿ, ಶಬ್ಬಲ್ ಬರೀದ್ ಶಾಹಿ, ಅಷ್ಟೂರು, ನಿಜಾಮ ಕೋಟೆಗಳು ಸೇರಿ 20 ಕ್ಕೂ ಹೆಚ್ಚು ಸ್ಮಾರಕಗಳು ಈ ರೀತಿಯ ಕೃತ್ಯಗಳಿಂದಲೇ ಹಾಳಾಗಿ ಹೋಗಿವೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್

ಈಗಾಗಲೇ ಐತಿಹಾಸಿಕ ಸ್ಮಾರಕಗಳು ನಶಿಸಿ ಹೋಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತವಾಗಲಿ, ಪ್ರಾಚ್ಯವಸ್ತು ಇಲಾಖೆಯಾಗಲಿ ಕ್ಯಾರೆ ಅಂತಿಲ್ಲ. ಹೀಗೆ ಮುಂದುವರಿದ್ರೆ ಮುಂದೊಂದು ದಿನ ಈ ಸ್ಮಾರಕಗಳೆಲ್ಲಾ ಮರೀಚಿಕೆಯಾಗುವ ಸಂಭವವಿದೆ ಅಂತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು

ಇನ್ನು ಇಲ್ಲಿನ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತ ಅದೆಷ್ಟೋ ಮಂದಿ ಇಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ. ಆದ್ರೆ, ಇಂದು ಈ ರೀತಿಯ ಅಸಭ್ಯ ಕೆತ್ತನೆಗಳಿಂದ ಇಡೀ ಸ್ಮಾರಕಗಳೇ ಹಾಳಾಗುತ್ತಿವೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು, ಇಲ್ಲಿ ಕಟ್ಟು ನಿಟ್ಟಿನ ಕ್ರಮ ತಂದು ಸ್ಮಾರಕಗಳನ್ನು ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ..

ABOUT THE AUTHOR

...view details