ಬೀದರ್: ಮನೆಯಲ್ಲಿ ಮಲಗಿದ್ದ ಬಾಲಕ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಔರಾದ ತಾಲೂಕಿನ ಭಂಡಾರ ಕುಮುಟಾದಲ್ಲಿ ನಡೆದಿದೆ.
ಬೀದರ್: ನಿದ್ರೆಯಲ್ಲಿದ್ದ ಬಾಲಕನನ್ನು ಚಿರನಿದ್ರೆಗೆ ಕರೆದೊಯ್ದ ಹಾವು..! - ಈಟಿವಿ ಭಾರತ ಕನ್ನಡ
ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ
ರಾಮದಾಸ್ ಮಾಧವ್(8) ಮೃತ ಬಾಲಕ
ರಾಮದಾಸ್ ಮಾಧವ್(8) ಮೃತ ಬಾಲಕ. ಹೆತ್ತವರೊಂದಿಗೆ ಬಾಲಕ ಮಲಗಿದ್ದ ವೇಳೆ ಹಾವು ಆತನ ಮೈಗೆ ಸುತ್ತಿಕೊಂಡಿದೆ. ಹಾವನ್ನು ನೋಡಿದ ತಂದೆ ಬಿಡಿಸಲು ಪ್ರಯತ್ನಿಸಿದ್ದು, ಸಾಧ್ಯವಾಗದಾಗ ಅದನ್ನು ಕೊಂದಿದ್ದಾರೆ. ಬಳಿಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ