ಕರ್ನಾಟಕ

karnataka

ETV Bharat / state

ಲಾಕ್​​ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಪುಂಡರಿಗೆ ಬಸ್ಕಿ ಹೊಡೆಸಿದ ಬೀದರ್​ ಪೊಲೀಸರು.. - ಲಾಕ್​ಡೌನ್ ಉಲ್ಲಂಘನೆ

ಲಾಕ್​ಡೌನ್ ಜಾರಿಯಾದ ಬಳಿಕ ಜನರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವುದೇ ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಇದೀಗ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಿಳಿಯುತ್ತಿರುವ ಜನರಿಗೆ ಬೀದರ್ ಪೊಲೀಸರು ಬಸ್ಕಿ ಹೊಡೆಸಿ ದಂಡ ಹಾಕುತ್ತಿದ್ದಾರೆ. ಈ ಮೂಲಕ ಜನರಿಗೆ ಕೊರೊನಾ ವಿರುದ್ಧ ಎಚ್ಚರಿಕೆ ವಹಿಸುವಂತೆ ತಿಳಿಹೇಳುತ್ತಿದ್ದಾರೆ.

bider police take a charge on those who violated lockdown in city
ಲಾಕ್​​ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಪುಂಡರಿಗೆ ಬಸ್ಕಿ ಹೊಡೆಸಿದ ಬೀದರ್​ ಪೊಲೀಸರು

By

Published : Apr 29, 2020, 6:36 PM IST

ಬೀದರ್ :ಬೀದರ್​ನಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯನ್ನು ಕೆಂಪು ವಲಯವಾಗಿ ಘೋಷಣೆ ಮಾಡಲಾಗಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿ ರಸ್ತೆಗೆ ಬರುವ ವಾಹನ ಸವಾರರಿಗೆ ಪೊಲೀಸರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ನಗರದ ಅಂಬೇಡ್ಕರ್​ ವೃತದಲ್ಲಿ ಡಿವೈಎಸ್​ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ಪೊಲೀಸರು ಲಾಕ್​ಡೌನ್ ನಿಯಮ ಉಲ್ಲಂಘಿಸಿದವರನ್ನು ನಡು ರಸ್ತೆಯಲ್ಲೇ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದರು. ಬೇಕಾಬಿಟ್ಟಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ಎಷ್ಟೇ ಹೇಳಿದರೂ ಕೇಳದೆ ಬೇಕಾಬಿಟ್ಟಿ ಓಡಾಡುವ ಪುಡಾರಿಗಳಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.

ಲಾಕ್​ಡೌನ್​ ಇದ್ದರೂ ಅನಗತ್ಯ ಮನೆಯಿಂದ ಹೊರಬರುವವರ ಪ್ರಮಾಣ ಹೆಚ್ಚಾಗುತ್ತಿದೆ. ಬೀದರ್​ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೀದರ್​ ಜಿಲ್ಲೆಗೆ ಆರೇಂಜ್​ ಝೋನ್​ಗೆ ಸೇರಿಸಲಾಗಿದೆ. ಆದರೆ, ಬೀದರ್​ ಓಲ್ಡ್ ಸಿಟಿ ಈಗಲೂ ಕೂಡ ರೆಡ್​ ಝೋನ್​ನಲ್ಲೇ ಇಡಲಾಗಿದೆ. ಸುಡು ಬಿಸಿಲಿನ ತಾಪದ ನಡುವೆ ಬೈಕ್ ಮೇಲೆ ಮನೆಯಿಂದ ಹೊರ ಬಂದ ಸವಾರರಿಗೆ ಬಸ್ಕಿ ಹೊಡೆಸಿರುವುದಲ್ಲದೆ ದಂಡ ವಿಧಿಸಿದ್ದಾರೆ ಪೊಲೀಸರು.

ABOUT THE AUTHOR

...view details