ಕರ್ನಾಟಕ

karnataka

ETV Bharat / state

ಬೀದರ್​ಗೆ ಬಿ.ಎಲ್.ಸಂತೋಷ್ ಭೇಟಿ; ಚುನಾವಣಾ ಸಿದ್ಧತೆ ಪರಿಶೀಲನೆ - etv bharat kannada

ಬಿ.ಎಲ್.ಸಂತೋಷ್​ ಅವರು ಬೀದರ್​ ಜಿಲ್ಲೆಗೆ ಭೇಟಿ ನೀಡಿದ್ದು, ಚುನಾವಣೆ ಸಿದ್ಧತೆ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

B L Santhosh
ಬಿ ಎಲ್ ಸಂತೋಷ್

By

Published : Dec 30, 2022, 5:15 PM IST

Updated : Dec 31, 2022, 5:11 PM IST

ಬೀದರ್​ಗೆ ಸಂತೋಷ್​ ಭೇಟಿ

ಬೀದರ್:ಮುಂಬರುವ ವಿಧಾನಸಭೆ ಚುನಾವಣೆಗೆ ಪೂರ್ವ ಸಿದ್ಧತೆ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರಿಂದು ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಬೆಳಗ್ಗೆ ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಆಗಮಿಸಿದ ಅವರು ಗೋ ಪೂಜೆ ನೆರವೇರಿಸಿ, ಆಶ್ರಮದ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರೊಂದಿಗೆ ಉಪಹಾರ ಸೇವಿಸಿದರು. ಬಳಿಕ ನೌಬಾದನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಿ ಜಿಲ್ಲಾ ಕೋರ್ ಕಮಿಟಿ, ಶಕ್ತಿ ಕೇಂದ್ರದ ಪ್ರಮುಖರು ಮತ್ತು ಪದಾಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದರು. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಈಗಿನ ಸ್ಥಿತಿಗತಿ, ಟಿಕೆಟ್ ಆಕಾಂಕ್ಷಿಗಳ ನಡುವಿನ ಬಂಡಾಯ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆದರು ಎಂದು ಮೂಲಗಳು ಮಾಹಿತಿ ನೀಡಿವೆ.

ನಂತರ ಭಾಲ್ಕಿಗೆ ತೆರಳಿ ಕಳೆದ ವರ್ಷ ನಿಧನರಾದ ದತ್ತಾತ್ರೇಯ ತೂಗಾಂವಕರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್, ಶಾಸಕ ಶರಣು ಸಲಗರ, ಎಂಎಲ್​ಸಿ ರಘುನಾಥರಾವ್ ಮಲ್ಕಾಪುರೆ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.

ಇದನ್ನೂ ಓದಿ:ಸಿದ್ದೇಶ್ವರ ಸ್ವಾಮೀಜಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು

Last Updated : Dec 31, 2022, 5:11 PM IST

ABOUT THE AUTHOR

...view details