ಬೀದರ್:ಬೇವಿನ ಮರದಿಂದ ಹಾಲಿನ ರೂಪದ ದ್ರವ ನಿರಂತರವಾಗಿ ಹರಿಯುತ್ತಿದ್ದು, ಸ್ಥಳೀಯರು ಇದನ್ನು ದೈವಲೀಲೆಯೆಂದು ದೇವಾರಾಧನೆ ಮಾಡುತ್ತಿದ್ದಾರೆ.
ಬೇವಿನ ಮರದಿಂದ ವಿಚಿತ್ರ ದೃವ ಧಾರೆ....ಬೀದರ್ನಲ್ಲೊಂದು ಪ್ರಕೃತಿ ವಿಸ್ಮಯ...! ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರಲ್ಲಿ ಈ ವಿಸ್ಮಯ ನಡೆದಿದ್ದು, ಒಂದು ವಾರದಿಂದ ಬಿಳಿ ಬಣ್ಣದ ಹಾಲಿನ ರೂಪದ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು, ದಸರಾ ನವರಾತ್ರಿ ಹಬ್ಬದಲ್ಲೇ ಹೀಗೆ ಬೇವಿನ ಮರದಿಂದ ಹಾಲು ಹೊರ ಬರುತ್ತಿದೆಯೆಂದು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡ್ತಿದ್ದಾರೆ.
ಪವಾಡವೋ, ವಿಜ್ಞಾನವೋ... ಬೇವಿನ ಮರದಲ್ಲಿ ಜಿನುಗಿತು ಸಿಹಿ ಹಾಲು
ಬೇವಿನ ಮರದಲ್ಲಿ ಉಕ್ಕುತಿದೆ ಹಾಲು.. ವಿಸ್ಮಯ ನೋಡಲು ಹರಿದು ಬರುತ್ತಿದೆ ಜನಸಾಗರ
ವಿಜಯದಶಮಿ ಹಬ್ಬದ ಪ್ರಯುಕ್ತ ಅಂಬಾ ಭವಾನಿ ಮಾತೆ ಘಟಸ್ಥಾಪನೆ ಆಗಿರುತ್ತೆ. ಅಂಬಾ ಭವಾನಿ ಮಾತೆಯ ಮೆಚ್ಚಿನ ಮರ ಬೇವಿನ ಗಿಡ ಆಗಿದ್ದು ಇದು ಸಾಕ್ಷಾತ್ ಭವಾನಿ ಮಾತೆಯ ಸ್ವರೂಪವಾಗಿದೆಯೆಂದು ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ಭಾಗದಿಂದ ಜನರು ಬಂದು ಪ್ರಕೃತಿ ವಿಸ್ಮಯ ನೋಡಿ ಬೆರಗಾಗಿ ಹೋದರೆ ಮತ್ತೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ.
ಸರ್ವೇ ಸಾಮಾನ್ಯ:ಮಳೆಗಾಲದ ಸಮಯದಲ್ಲಿ ಕೆಲವು ಬೇವಿನ ಮರಗಳಿಂದ ಸಿಹಿಯಾದ ಹಾಲು ಹೊರ ಬರುವುದು ಕಾಣಬಹುದು. ಇಂತಹ ಮರಗಳು ಕ್ಯಾನ್ಸರ್ ಪೀಡಿತವಾಗಿವೆ, ಒಳಗಿರುವ ಗಂಟಿನ ಪರಿಣಾಮ ಮಳೆಗಾಲದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತದೆ ಎಂದು ಸಸ್ಯಶಾಸ್ತ್ರ ಹೇಳುತ್ತದೆ.