ಕರ್ನಾಟಕ

karnataka

15 ದಿನಗಳಲ್ಲಿ 20 ಜನರು ಸಾವು: ಭಾಲ್ಕಿಯ ನಾವದಗಿ ಗ್ರಾಮಸ್ಥರಲ್ಲಿ ಆತಂಕ

ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 20 ಜನರು ಮೃತಪಟ್ಟಿದ್ದಾರೆ. ಈ ಪೈಕಿ 3 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಉಳಿದ 17 ಜನರು ಕೆಮ್ಮು, ಜ್ವರ, ಶೀತದಿಂದ ಸಾವನ್ನಪ್ಪಿದ್ದಾರೆ. ಸರಣಿ ಸಾವಿನಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

By

Published : May 20, 2021, 7:25 AM IST

Published : May 20, 2021, 7:25 AM IST

Updated : May 20, 2021, 7:53 AM IST

balki
ನಾವದಗಿ ಗ್ರಾಮದಲ್ಲಿ 15 ದಿನಗಳಲ್ಲಿ 20 ಜನರು ಸಾವು

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಕಳೆದೆರಡು ವಾರದಲ್ಲಿ 20 ಜನರು ಸಾವನ್ನಪ್ಪಿದ್ದು, ವಿಚಿತ್ರ ರೋಗ ಬಾಧೆ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

ನಾವದಗಿ ಗ್ರಾಮದಲ್ಲಿ 15 ದಿನಗಳಲ್ಲಿ 20 ಜನರು ಸಾವು

ನಾವದಗಿ ಗ್ರಾಮದಲ್ಲಿ ಮೃತಪಟ್ಟ ಒಟ್ಟು 20 ಜನರ ಪೈಕಿ ಮೂವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಉಳಿದ 17 ಜನರು ಕೆಮ್ಮು, ಜ್ವರ, ಶೀತದಿಂದ ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಸರಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ ಹಾಗು ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ್ ನಿರಗುಡೆ ನೇತೃತ್ವದ ಅಧಿಕಾರಿಗಳ ತಂಡ, ಸಾರ್ವಜನಿಕ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಈ ಹಿಂದೆ ಸೋಡಿಯಂ ಮಿಶ್ರಿತ ನೀರು ಕುಡಿದು ಇದೇ ಮಾದರಿಯಲ್ಲಿ ಗ್ರಾಮದಲ್ಲಿ ಸರಣಿ ಸಾವುಗಳಾಗಿದ್ದವು.

ಇದನ್ನೂ ಓದಿ:ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್​ಓ ಹೊಸ ನೀತಿಯ ಪೂರ್ಣ ಮಾಹಿತಿ

Last Updated : May 20, 2021, 7:53 AM IST

ABOUT THE AUTHOR

...view details