ಕರ್ನಾಟಕ

karnataka

By

Published : Apr 18, 2020, 7:39 AM IST

ETV Bharat / state

ಬೀದರ್​: ಇನ್ನೂ 1100 ಕೊರೊನಾ ಶಂಕಿತರ ಸ್ಯಾಂಪಲ್ಸ್​ ಪರೀಕ್ಷೆ ಬಾಕಿ

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ ನಡೆಸಿದ ವಿಡಿಯೋ ಸಂವಾದದಲ್ಲಿ ಕೃಷ್ಣಾರೆಡ್ಡಿ ಅವರು ಮಾಹಿತಿ ನೀಡಿದರು. ಕೊರೊನಾ ಶಂಕಿತರ ರಕ್ತ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವುದು ಬಾಕಿ ಇದೆ, ಹೀಗಾಗಿ ಸ್ಯಾಂಪಲ್ ಹೆಚ್ಚಾಗಿದೆ ಎಂದರು.

distict office
ಜಿಲ್ಲಾಧಿಕಾರಿಗಳ ಕಚೇರಿ

ಬೀದರ್: ಜಿಲ್ಲೆಯಲ್ಲಿ ಇದುವರೆಗೆ 642 ಸ್ಯಾಂಪಲ್ಸ್​ ಟೆಸ್ಟ್ ಆಗಿದ್ದು, ಇನ್ನೂ 1100 ಸ್ಯಾಂಪಲ್ಸ್​​ ಟೆಸ್ಟ್ ಮಾಡುವುದು ಬಾಕಿಯಿದೆ ಎಂದು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿ ಡಾ.ಕೃಷ್ಣಾ ರೆಡ್ಡಿ ಅವರು ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ ನಡೆಸಿದ ವಿಡಿಯೋ ಸಂವಾದದಲ್ಲಿ ಕೃಷ್ಣಾರೆಡ್ಡಿ ಅವರು ಮಾಹಿತಿ ನೀಡಿದರು. ಕೊರೊನಾ ಶಂಕಿತರ ರಕ್ತ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವುದು ಬಾಕಿ ಇದೆ, ಹೀಗಾಗಿ ಸ್ಯಾಂಪಲ್ ಹೆಚ್ಚಾಗಿದೆ ಎಂದರು.

ಈ ವೇಳೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹದೇವ ನಾಲ್ಕು ವೈದ್ಯರ ತಂಡ ರಚನೆ ಮಾಡಿ ಸ್ಯಾಂಪಲ್ ಟೆಸ್ಟ್ ಕಾರ್ಯ ತೀವ್ರಗೊಳಿಸಿ ಪ್ರತಿ ದಿನ ಬೆಂಗಳೂರಿನ ಪ್ರಯೋಗಾಲಯಕ್ಕೆ 300 ರಂತೆ ಸ್ಯಾಂಪಲ್ಸ್ ಕಳುಹಿಸಿ ಕೊಡಲು ಸೂಚನೆ ನೀಡಿದರು.

ಈ ವೇಳೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ ರೆಡ್ಡಿ ಹಾಗೂ ಬ್ರೀಮ್ಸ್ ನಿರ್ದೇಶಕ ಡಾ.ಶಿವಕುಮಾರ್ ಸೇರಿದಂತೆ ಅಧಿಕಾರಿಗಳ ತಂಡ ಉಪಸ್ಥಿತರಿದ್ದರು.

ABOUT THE AUTHOR

...view details